-->
 ಉಡುಪಿ ಪೋದಾರ್ ಶಾಲೆಯಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ

ಉಡುಪಿ ಪೋದಾರ್ ಶಾಲೆಯಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ


ಉಡುಪಿಯ ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿಯವರ ಜಯಂತಿಯನ್ನು ಗೌರವಪೂರ್ವವಾಗಿ ಆಚರಿಸಲಾಯಿತು. ಕಾರ್ಯಕ್ರಮಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.


ಹತ್ತನೇಯ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಕಾಯಕ್ರಮದಲ್ಲಿ ಕಿರು ನಾಟಕ, ಭಾಷಣ, ಸರ್ವಧರ್ಮ ಪ್ರಾರ್ಥನೆ ಹಾಗೂ ರಘುಪತಿ ರಾಘವ ಗೀತೆಯನ್ನು ಪ್ರಸ್ತುತಪಡಿಸಲಾಯಿತು.


ಶಾಲೆಯ ಪ್ರಾಂಶುಪಾಲೆ ನೇತ್ರಾ ಹೆಚ್ ಅವರು ಗಾಂಧೀಜಿಯವರ ಸತ್ಯ, ಅಹಿಂಸೆ, ಕೌಶಲ್ಯಾಧಾರಿತ ಶಿಕ್ಷಣ, ಶ್ರಮ, ಒಗ್ಗಟ್ಟಿನ ಮಹತ್ವ, ಸತ್ಯಮೇವ ಜಯತೆ ಎಂಬ ಸಂದೇಶ ಹಾಗೂ ಶಾಸ್ತ್ರಿಯವರ ಸರಳತೆ, ಶಿಸ್ತು ಮತ್ತು ದೇಶಪ್ರೇಮದ ಆದರ್ಶಗಳನ್ನು ತಿಳಿಸಿ ಕೊಟ್ಟರು. ವಿದ್ಯಾರ್ಥಿಗಳನ್ನು ಅಭಿನಂದಿಸಿ, ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಶಾಲೆಯ ಪ್ರಾಂಶುಪಾಲೆ ನೇತ್ರಾ ಹೆಚ್, ಪೋದರ್ ಪ್ರೆಪ್ ಮುಖ್ಯ ಶಿಕ್ಷಕಿ ಗೀತಾ ಲವೀನ್ ಪೂಜಾರಿ, ಶಾಲೆಯ ಆಡಳಿತಾಧಿಕಾರಿ ಹರೀಶ್ ನಾಯಕ್, ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಹಾಗೂ ಪೋಷಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ನಿರೂಪಣೆ ಹಾಗೂ  ಸ್ವಾಗತವನ್ನು ಧೃತಿ, ಅರ್ಹಮ್ ಮಾಡಿದರೆ, ವಂದನಾರ್ಪನೆಯನ್ನು ಕೇಶರ್ ನೆರೆವೇರಿಸಿದರು.


Ads on article

Advertise in articles 1

advertising articles 2

Advertise under the article