ಎಂ.ಆರ್.ಪಿ.ಎಲ್. ಸ್ಪೋಟ: ಇನ್ನೋರ್ವ ಸಾವು
Saturday, October 17, 2026
ಸೆ. 30ರಂದು ಮಂಗಳೂರಿನ ಎಂಆರ್ಪಿಎಲ್ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ ಡಿ’ಸಿಲ್ವ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದರು.
ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ಸಕಲ ಪ್ರಯತ್ನಗಳೂ ವಿಫಲವಾದ ಹಿನ್ನೆಲೆಯಲ್ಲಿ ಮೃತಪಟ್ಟರೆಂದು ತಿಳಿದು ಬಂದಿದೆ.
ರಾಜೇಶ್ ಡಿಸಿಲ್ವ ಅವರ ಅಗಲಿಕೆಯಿಂದ ಕುಟುಂಬಸ್ಥರು ಹಾಗೂ ಬಂಧು ಮಿತ್ರರ ವಲಯದಲ್ಲಿ ದುಃಖ ಮಡುಗಟ್ಟಿದೆ.
ಈ ದುರಂತದಲ್ಲಿ MRPL ಗುತ್ತಿಗೆ ಆಧಾರಿತ ಸಿಬ್ಬಂದಿ, ಮೂಲ್ಕಿ ನಿವಾಸಿ ಮನೀಶ್ ಕರ್ಕಡ (30) ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಮನೀಶ್ ಅವರ ಕುಟುಂಬಕ್ಕೆ MRPL ಆಡಳಿತ ಮಂಡಳಿ ರೂ. 1.20 ಕೋಟಿ ಪರಿಹಾರ ಘೋಷಿಸಿತ್ತು.