-->
ಉಚ್ಚಿಲ ದಸರಾ ಮುದ್ದು ಶಾರದಾ ಛದ್ಮವೇಷ ಸ್ಪರ್ಧೆಯಲ್ಲಿ ತಪಸ್ಯ ನಾಗಪ್ರಸಾದ್ ಪ್ರಥಮ

ಉಚ್ಚಿಲ ದಸರಾ ಮುದ್ದು ಶಾರದಾ ಛದ್ಮವೇಷ ಸ್ಪರ್ಧೆಯಲ್ಲಿ ತಪಸ್ಯ ನಾಗಪ್ರಸಾದ್ ಪ್ರಥಮ


ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ–2026ರ ಅಂಗವಾಗಿ ಶುಕ್ರವಾರ ಆಯೋಜಿಸಲಾದ ಮುದ್ದುಮಕ್ಕಳ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ ಮಲ್ಪೆಯ ತಪಸ್ಯ ನಾಗಪ್ರಸಾದ್ ಪ್ರಥಮ ಸ್ಥಾನ ಗಳಿಸಿದರು.

ದೇವಸ್ಥಾನದ ಶಾಲಿನಿ ಡಾ. ಜಿ. ಶಂಕರ್ ಮುಖ್ಯ ವೇದಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ 3ರಿಂದ 9 ವರ್ಷದೊಳಗಿನ 76 ಮಕ್ಕಳು ಶಾರದಾ ಮಾತೆಯ ವೇಷ ಧರಿಸಿ ಗಮನ ಸೆಳೆದರು. ಪುಟಾಣಿಗಳ ಆಕರ್ಷಕ ವೇಷಭೂಷಣ ಹಾಗೂ ಮುಗ್ಧ ಅಭಿವ್ಯಕ್ತಿಗಳು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾದವು.

ಕಿದಿಯೂರಿನ ಸಾನಿಕ ದ್ವಿತೀಯ ಸ್ಥಾನ ಹಾಗೂ ಸುರತ್ಕಲ್‌ನ ಪ್ರಶ್ವಿ ಎಸ್. ಪುತ್ರನ್ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಕ್ರಮವಾಗಿ 8,000, 6,000 ಹಾಗೂ 4,000 ನಗದು ಬಹುಮಾನ ವಿತರಿಸಲಾಯಿತು. 

ಸ್ಪರ್ಧೆಯಲ್ಲಿ ಭಾಗವಹಿಸಿದ ಉಳಿದ ಎಲ್ಲ ಮಕ್ಕಳಿಗೂ ತಲಾ 1,000 ಪ್ರೋತ್ಸಾಹಧನ ನೀಡಲಾಯಿತು.

Ads on article

Advertise in articles 1

advertising articles 2

Advertise under the article