-->
ಟೆಸ್ಲಾ ಸಂಸ್ಥೆಯಿಂದ ಗಾಳಿಯಲ್ಲಿ ಹಾರುವ ‘ರೋಡ್‌ಸ್ಟರ್’ ಕಾರು ಅನಾವರಣ; 2028ರಲ್ಲಿ ಉತ್ಪಾದನೆ ಆರಂಭ

ಟೆಸ್ಲಾ ಸಂಸ್ಥೆಯಿಂದ ಗಾಳಿಯಲ್ಲಿ ಹಾರುವ ‘ರೋಡ್‌ಸ್ಟರ್’ ಕಾರು ಅನಾವರಣ; 2028ರಲ್ಲಿ ಉತ್ಪಾದನೆ ಆರಂಭ


ಗುರುತ್ವಾಕರ್ಷಣೆಯನ್ನೂ ಮೀರಿ ಗಾಳಿಯಲ್ಲಿ ಪಲ್ಟಿ ಹೊಡೆಯುವ, ಕಣ್ಣು ಮಿಟುಕಿಸುವಷ್ಟರಲ್ಲಿ ನೂರರ ಸನಿಹದ ವೇಗ ಪಡೆಯುವ ಸಾಮರ್ಥ್ಯದ ‘ರೋಡ್‌ಸ್ಟರ್’ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಿನ ಪ್ರಾಯೋಗಿಕ ಪ್ರದರ್ಶನದ ಮೂಲಕ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪೆನಿ ಜಾಗತಿಕ ವಾಹನೋದ್ಯಮದಲ್ಲಿ ಹೊಸ ಕುತೂಹಲ ಮೂಡಿಸಿದೆ. 

ಸ್ಪೇಸ್‌ಎಕ್ಸ್‌ನಿಂದ ಪ್ರೇರಿತವಾದ ವಿಶೇಷ ಥ್ರಸ್ಟರ್ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಕಾರು, ಕೇವಲ ಒಂದು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಗಂಟೆಗೆ 97 ಕಿ.ಮೀ. ವೇಗ ಪಡೆಯುವ ಸಾಮರ್ಥ್ಯ ಹೊಂದಿದೆ. ಅಮೆರಿಕದ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ ಟೆಸ್ಲಾ, ತನ್ನ ಬಹುನಿರೀಕ್ಷಿತ ನೂತನ ತಲೆಮಾರಿನ ರೋಡ್‌ಸ್ಟರ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಅಕ್ಟೋಬರ್ 15ರಂದು ಶುಕ್ರವಾರ ಟೆಕ್ಸಾಸ್ ನಲ್ಲಿ ನಡೆದ ವಿಶೇಷ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದೆ. ಅತ್ಯಾಧುನಿಕ ಕಾರ್ಯಕ್ಷಮತೆ ಹಾಗೂ ಸ್ಪೇಸ್‌ಎಕ್ಸ್‌ನಿಂದ ಪ್ರೇರಿತವಾದ ಕಂಪ್ರೆಸ್ಡ್ ಅನಿಲ ಥ್ರಸ್ಟರ್ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಕಾರಿನ ವಾಣಿಜ್ಯ ಉತ್ಪಾದನೆ 2028ರಲ್ಲಿ ಆರಂಭವಾಗುವ ನಿರೀಕ್ಷೆಯಿದೆ.

2017ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಘೋಷಿಸಲ್ಪಟ್ಟಿದ್ದ ರೋಡ್‌ಸ್ಟರ್ ಕಾರಿನ ಬಿಡುಗಡೆಯನ್ನು ಹಲವು ಬಾರಿ ಮುಂದೂಡಲಾಗಿತ್ತು.

ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 480 ಕಿ.ಮೀ.ಗೂ ಅಧಿಕ ದೂರ ಕ್ರಮಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

 ಕಾರಿನ ಅಂತಿಮ ಬೆಲೆ ಹಾಗೂ ಗ್ರಾಹಕರಿಗೆ ವಿತರಣೆ ಆರಂಭಿಸುವ ನಿಖರ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಸದ್ಯದ ಯೋಜನೆಯ ಪ್ರಕಾರ 2028ರಲ್ಲಿ ಉತ್ಪಾದನೆ ಆರಂಭಗೊಳ್ಳುವ ಸಾಧ್ಯತೆಗಳಿವೆ.

Ads on article

Advertise in articles 1

advertising articles 2

Advertise under the article