-->
ಉಡುಪಿಯ ಹೆಸರಾಂತ ಛಾಯಾಗ್ರಾಹಕ ‘ಫೋಕಸ್ ರಾಘು’ಗೆ ಪ್ರತಿಷ್ಠಿತ ವರ್ಣಶ್ರೀ ಪ್ರಶಸ್ತಿ ಪ್ರದಾನ

ಉಡುಪಿಯ ಹೆಸರಾಂತ ಛಾಯಾಗ್ರಾಹಕ ‘ಫೋಕಸ್ ರಾಘು’ಗೆ ಪ್ರತಿಷ್ಠಿತ ವರ್ಣಶ್ರೀ ಪ್ರಶಸ್ತಿ ಪ್ರದಾನ


ಛಾಯಾಗ್ರಹಣ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಗಾಗಿ ಉಡುಪಿ ಜಿಲ್ಲೆಯ ಹೆಸರಾಂತ ಛಾಯಾಗ್ರಾಹಕ, ‘ಫೋಕಸ್ ರಾಘು’ ಎಂದೇ ಜನಪ್ರಿಯರಾಗಿರುವ ರಾಘವೇಂದ್ರ ಕೊಡಂಗಳ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರತಿಷ್ಠಿತ ವರ್ಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗದಗ ಜಿಲ್ಲೆಯ ಮುಂಡರಗಿಯ ಸಂಸ್ಕೃತಿ ಕನ್ವೆನ್ಷನ್ ಬೈ ಟಿ.ಆರ್.ಐ. ವೆಂಚರ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಡುಪಿ ಜಿಲ್ಲೆಯ ಕೊಡಂಗಾಲ್ ಎಂಬ ಪುಟ್ಟ ಹಳ್ಳಿಯಿಂದ ಬಂದ ರಾಘವೇಂದ್ರ ಅವರು ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ಸೃಜನಶೀಲತೆಯ ಮೂಲಕ ಛಾಯಾಗ್ರಹಣ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ. ‘ಫೋಕಸ್ ರಾಘು’ ಎಂಬ ಹೆಸರಿನೊಂದಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅವರು, ಇದುವರೆಗೆ 300ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಅಲ್ಲದೆ, 25ಕ್ಕೂ ಹೆಚ್ಚು ದೇಶಗಳಲ್ಲಿ ನಡೆದ ಛಾಯಾಗ್ರಹಣ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ.

ಅವರ ಕಲಾತ್ಮಕ ಛಾಯಾಚಿತ್ರಗಳು ಭಾರತ ಸೇರಿದಂತೆ ಫ್ರಾನ್ಸ್, ಸಿಂಗಾಪುರ, ಇಂಗ್ಲೆಂಡ್, ಗ್ರೀಸ್, ಕೆನಡಾ, ಚೀನಾ ಹಾಗೂ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪ್ರದರ್ಶನಗೊಂಡಿವೆ. ಬಿ.ಕಾಂ ಪದವೀಧರರಾದ ರಾಘವೇಂದ್ರ ಅವರು ದಿವಂಗತ ಗುರುದತ್ ಕಾಮತ್ ಅವರ ಶಿಷ್ಯರಾಗಿದ್ದು, ಗುರುಗಳ ಮಾರ್ಗದರ್ಶನದಲ್ಲಿ ಛಾಯಾಗ್ರಹಣ ಕಲೆಯನ್ನು ಬೆಳೆಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article