ಕೊಡವೂರು ಗೋಶಾಲೆಗೆ ಗೋವುಗಳ ಮೇವಿಗಾಗಿ ಒಣಹುಲ್ಲು ದಾನ
Friday, October 02, 2026
ಉಡುಪಿ ತಾಲೂಕಿನ ಕೊಡವೂರಿನ ಪೇಜಾವರ ಅಧೋಕ್ಷಜ ಮಠದ ಗೋಶಾಲೆಗೆ ಗೋವುಗಳ ಮೇವಿಗಾಗಿ ಒಂದು ಟೆಂಪೋ ಒಣಹುಲ್ಲನ್ನು ದಾನವಾಗಿ ನೀಡಲಾಯಿತು.
ಕುಂಜಾರಗಿರಿಯ ನಂದ ಗಣೇಶ ಅವರು ಒಣಹುಲ್ಲನ್ನು ದಾನವಾಗಿ ನೀಡಿದ್ದು, ಈ ಸಂದರ್ಭದಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.
ಕೊಡವೂರು ಗೋಶಾಲೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ಗೋವುಗಳು, ಅಪಘಾತದಲ್ಲಿ ಗಾಯಗೊಂಡ ಗೋವುಗಳು ಹಾಗೂ ಗೋಕಳ್ಳರಿಂದ ರಕ್ಷಿಸಲ್ಪಟ್ಟ ಗೋವುಗಳಿಗೆ ಆಶ್ರಯ ಕಲ್ಪಿಸಲಾಗುತ್ತಿದೆ. ಗೋವುಗಳ ಪಾಲನೆ-ಪೋಷಣೆಗೆ ನಿರಂತರವಾಗಿ ಮೇವಿನ ಅಗತ್ಯವಿದ್ದು, ದಾನಿಗಳ ಸಹಕಾರದಿಂದ ಗೋಶಾಲೆಯ ನಿರ್ವಹಣೆಗೆ ನೆರವಾಗುತ್ತಿದೆ.