-->
 ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ದಶಮಾನೋತ್ಸವದ ಲೋಗೋ‌, ಡೈರೆಕ್ಟರಿ ಬಿಡುಗಡೆ

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ದಶಮಾನೋತ್ಸವದ ಲೋಗೋ‌, ಡೈರೆಕ್ಟರಿ ಬಿಡುಗಡೆ


ಕಾಪು ತಾಲೂಕಿನ ‌ಕಾರ್ಯನಿರತ ಪತ್ರಕರ್ತರ‌ ಸಂಘದ ದಶಮಾನೋತ್ಸವದ ಲೋಗೋ ಹಾಗೂ ಡೈರೆಕ್ಟರಿಯನ್ನು‌ ಉಡುಪಿ ಜಿಲ್ಲಾ ‌ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ ‌ಕುರ್ಯ ಬುಧವಾರ ಕಾಪು ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭ ‌ಮಾತನಾಡಿದ‌‌‌ ಅವರು‌ ಕಾಪು‌ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘವು ದಶಮಾನೋತ್ಸವದ ನಿಮಿತ್ತ ಹಮ್ಮಿಕೊಳ್ಳಲಿರುವ ದಶ‌ ಕಾರ್ಯಕ್ರಮಗಳು ಯಶಸ್ವಿಯಾಗಲಿ‌ ಎಂದು‌‌ ಶುಭ ಹಾರೈಸಿದರು.

ಈ‌ ಸಂದರ್ಭ ಉಡುಪಿ ಜಿಲ್ಲಾ ‌ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ  ನಝೀರ್ ಪೊಲ್ಯ, ಕಾರ್ಯದರ್ಶಿ ಸುರೇಶ್ ಎರ್ಮಾಳು, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹಮೀದ್ ಪಡುಬಿದ್ರಿ, ಕಾರ್ಯದರ್ಶಿ ಪುಂಡಲೀಕ‌ ಮರಾಠೆ, ಕೋಶಾಧಿಕಾರಿ‌ ಸಂತೋಷ್ ಉಳಿಯಾರು, ಉಡುಪಿ ಜಿಲ್ಲಾ ‌ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿಗಳಾದ ಹರೀಶ್ ಹೆಜ್ಮಾಡಿ, ವಿಜಯ ಆಚಾರ್ಯ ಉಚ್ಚಿಲ, ಕಾಪು ತಾಲೂಕು ಪತ್ರಕರ್ತರ ಸಂಘದ ಪೂರ್ವ ಅಧ್ಯಕ್ಷರುಗಳು, ಸದಸ್ಯರು ‌ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article