
ಆಕ್ಸಿಯಮ್-4: SHUBHANSHU SHUKLA SPLASHDOWN ಶುಭಾಂಶು ಶುಕ್ಲಾ ಸೇರಿ 4 ಗಗನಯಾತ್ರಿಗಳ ಯಶಸ್ವಿ ಭೂಸ್ಪರ್ಶ
ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಭೂಮಿಗೆ ಮರಳಿದ್ದಾರೆ. 18 ದಿನಗಳ ಐತಿಹಾಸಿಕ ಪ್ರಯಾಣದ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹಿಂತಿರುಗಿದ್ದಾರೆ. ಆಕ್ಸಿಯಮ್ -4 ಕಾರ್ಯಾಚರಣೆಯ ಅಡಿಯಲ್ಲಿ ಜೂನ್ 25 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿ0ದ ಬಾಹ್ಯಾಕಾಶ ಯಾನ ಆರಂಬಿಸಿದ ಶುಭಾಂಶು, ಸಸ್ಯಗಳ ಬೆಳವಣಿಗೆ ಮತ್ತು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಣಾಮಗಳ ಅಧ್ಯಯನ ಸೇರಿದಂತೆ ಐಎಸ್ಎಸ್ ನಲ್ಲಿ ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದರು. ಅವರ ತಂಡದಲ್ಲಿ ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್ನ ಸ್ಲಾವೋಸ್ ಉಜ್ನಾನ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಸೇರಿದ್ದಾರೆ. ನಾಲ್ವರು ಗಗನಯಾತ್ರಿಗಳು ಜುಲೈ 14ರಂದು ಸಂಜೆ 4:35 ಕ್ಕೆ ಐಎಸ್ಎಸ್ನಿಂದ ಹೊರಟರು. ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಸುಮಾರು 22.5 ಗಂಟೆಗಳ ಪ್ರಯಾಣದ ಮಾಡಿದ್ರು. ನಂತರ ಜುಲೈ 15ರ ಮಧ್ಯಾಹ್ನ 3 ಗಂಟೆಗೆ ಡ್ರ್ಯಾಗನ್ ಕ್ಯಾಪ್ಸುಲ್ ಕ್ಯಾಲಿಫೋರ್ನಿಯಾ ಕರಾವಳಿಯ ಬಳಿಯ ಪೆಸಿಫಿಕ್ ಮಹಾಸಾಗರದಲ್ಲಿ ‘ಸ್ಪ್ಲಾಶ್ಡೌನ್’ ಆಯ್ತು.