
NewsDelhi: ನರ್ಸ್ ನಿಮಿಷಾ ಪ್ರಿಯಾ ಮರಣ ದಂಡನೆ ಮುಂದೂಡಿಕೆ
15/07/2025 10:26 AM
ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷ ಪ್ರಿಯಾಳ ಮರಣದಂಡನೆಯನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ಸಂತ್ರಸ್ತೆಯ ಕುಟುಂಬವು ಇನ್ನೂ ಕ್ಷಮಾದಾನಕ್ಕೆ ಅಥವಾ 'ಬ್ಲಡ್ ಮನಿ' ಸ್ವೀಕರಿಸಲು ಒಪ್ಪಿಕೊಂಡಿಲ್ಲ ಎಂದು ಸೇವ್ ನಿಮಿಷ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್' ಸದಸ್ಯ ಸ್ಯಾಮ್ಯುಯೆಲ್ ಜೆರೋಮ್ ಭಾಸ್ಕರನ್ ಹೇಳಿದ್ದಾರೆ.
2017ರಲ್ಲಿ ತನ್ನ ಯೆಮೆನ್‌ನ ವ್ಯವಹಾರ ಪಾಲುದಾರ ತಲಾಲ್ ಅಬ್ದೋ ಮಹ್ದಿ ಕೊಲೆಗೆ ಗಲ್ಲು ಶಿಕ್ಷೆಗೊಳಗಾದ ನಿಮಿಷ ಪ್ರಿಯಾ ಅವರನ್ನು ರಕ್ಷಿಸಲು ಮಾತುಕತೆಗಳು ನಡೆಯುತ್ತಿದೆ. ಕಾಂತಪುರA ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಮಾತುಕತೆ ಬಳಿಕ ಪ್ರಸಿದ್ಧ ಸೂಫಿ ವಿದ್ವಾಂಸ ಶೇಖ್ ಹಬೀಬ್ ಉಮರ್ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿದ್ದರು. ಅವರ ಪ್ರತಿನಿಧಿಗಳು ತಲಾಲ್ ಅಬ್ದೋ ಮಹ್ದಿ ಅವರ ಸಹೋದರ ಸೇರಿದಂತೆ ಅವರ ಕುಟುಂಬದ ಜೊತೆ ನಿಕಟವಾಗಿ ಮಾತುಕತೆ ನಡೆಸಿದೆ ಎಂದು ತಿಳಿದು ಬಂದಿದೆ.