
Mangalore:ಕುಡ್ಲದ ಕುವರಿಯೀಗ ರೋಲ್ಸ್ ರಾಯ್ಸ್ ಎಂಪ್ಲಾಯಿ;ಸ0ಸ್ಥೆಯ ಕಿರಿಯ ಉದ್ಯೋಗಿ ರಿತುಪರ್ಣ
15/07/2025 10:59 AM
ಆಕೆಗಿನ್ನೂ 20ರ ಹರೆಯ.. ಈ ವಯಸ್ಸಲ್ಲಿ ಆಕೆಗೆ ತಾನು ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಳ್ಳುವ ತುಡಿತ.. ತನ್ನ ನೆಚ್ಚಿನ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ಕಳೆದ 8 ತಿಂಗಳಿನಿ0ದ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಹಾಗಂತ ಆಕೆ ಹತಾಷಳಾಗಿಲ್ಲ. ಸತತ ಪ್ರಯತ್ನದಿಂದ ಇದೀಗ ಅದೇ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾಳೆ. ಹೌದು.. ಮಂಗಳೂರಿನ ರಿತುಪರ್ಣ ಅಮೆರಿಕದ ಪ್ರತಿಷ್ಟಿತ ಕಂಪನಿಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ನ ಎಂಜಿನ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಎಂಜಿನಿಯರಿ0ಗ್ 6ನೇ ಸೆಮಿಸ್ಟರ್ ಓದುತ್ತಿರುವ ರಿತುಪರ್ಣ ರೋಲ್ಸ್ ರಾಯ್ಸ್ ಕಂಪನಿಯಲ್ಲಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 8 ತಿಂಗಳ ಕಾಲ ಸಂದರ್ಶನ ನೀಡಿದ್ದಾರೆ. ಕಂಪನಿಯ ವಿವಿಧ ಟಾಸ್ಕ್ಗಳನ್ನು ತಾಳ್ಮೆಯಿಂದ ಯಶಸ್ವಿಯಾಗಿ ನಿಭಾಯಿಸಿದ್ದಾರೆ. 8 ತಿಂಗಳ ಅವಿರತ ಪರಿಶ್ರಮಕ್ಕೆ ಇದೀಗ ಯಶಸ್ಸು ಸಿಕ್ಕಿದೆ. ಈಕೆ ಎಂಜಿನಿಯರಿAಗ್ ಪ್ರಥಮ ವರ್ಷದಲ್ಲಿದ್ದಾಗಲೇ ಆವಿಷ್ಕಾರದಲ್ಲಿ ಪ್ರವೀಣೆ. ಗೋವಾದಲ್ಲಿ ನಡೆದ ಅಂತಾರಾಷ್ಟಿçÃಯ ಮಟ್ಟದ ಇನ್ನೋವೇಶನ್ ಸಮ್ಮೇಳನದಲ್ಲಿ ಪಾಲ್ಗೊಂಡು, 15 ರಾಷ್ಟçಗಳ ಪ್ರತಿನಿಧಿಗಳ ಪೈಕಿ ಈಕೆಯ ಆವಿಷ್ಕಾರಕ್ಕೆ ಚಿನ್ನದ ಪದಕ ಪಡೆದುಕೊಂಡಿದ್ದರು.
ರೋಲ್ಸ್ ರಾಯ್ಸ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿರುವ ರಿತುಪರ್ಣ ಅವರಿಗೆ ಈಗ ರಾತ್ರಿ 12ರಿಂದ 6 ಗಂಟೆವರೆಗೆ ತರಬೇತಿ ನೀಡಲಾಗುತ್ತಿದೆ/ ಹಗಲು ಸಮಯದಲ್ಲಿ ತರಗತಿಗೆ ಹಾಜರಾಗಿ ರಾತ್ರಿ, ತರಬೇತಿಯಲ್ಲಿ ಪಾಲ್ಗೊಳ್ಳುತ್ತಾರೆ. 7ನೇ ಸೆಮಿಸ್ಟರ್ ಪೂರ್ಣಗೊಂಡ ಬಳಿಕ ಟೆಕ್ಸಾಸ್ಗೆ ತೆರಳಿ ಉದ್ಯೋಗಕ್ಕೆ ಸೇರಿಕೊಳ್ಳಲಿದ್ದಾರೆ. ರೋಲ್ಸ್ ರಾಯ್ಸ್ನಲ್ಲಿ ರಿತುಪರ್ಣ ಅವರ ವಾರ್ಷಿಕ ಆದಾಯ 72. 3 ಲಕ್ಷ ರೂಪಾಯಿ. ಒಟ್ಟಿನಲ್ಲಿ ಅವಿರತ ಪ್ರಯತ್ನ ಪೋಷಕರ ಪ್ರೋತ್ಸಾಹ ಕುಡ್ಲದ ಕುವರಿಯ ಲಕ್ ಅನ್ನೇ ಬದಲಿಸಿದೆ.