
Bangalore: ರೇಣುಕಾಸ್ವಾಮಿ ಹತ್ಯೆ ಪ್ರಕರಣ; ನಟ ದರ್ಶನ್‌ಗೆ ಎರಡು ದಿನ ರಿಲೀಫ್
22/07/2025
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ಗೆ ಎರಡು ದಿನ ರಿಲೀಫ್ ಸಿಕ್ಕಿದೆ. ಜಾಮೀನು ರದ್ದತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 24ಕ್ಕೆ ಮುಂದೂಡಿದೆ.
ದರ್ಶನ್ ಪರ ವಕೀಲರ ವಾದ ಮಂಡನೆಗೆ ಸಮಯಾವಕಾಶ ಕೋರಿದ ಕಾರಣ ಮುಂದೂಡಿಕೆ ಮಾಡಲಾಗಿದೆ. ನಟ ದರ್ಶನ್‌ಗೆ ಜಾಮೀನು ನೀಡಿರುವುದನ್ನು ಕರ್ನಾಟಕ ಸರ್ಕಾರವು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿತ್ತು. ಈ ಅರ್ಜಿ ವಿಚಾರಣೆ ಜುಲೈ 22 ನಡೆಯಬೇಕಿತ್ತು. ಆದರೆ, ಈಗ ಅರ್ಜಿ ವಿಚಾರಣೆ ಜುಲೈ 25ಕ್ಕೆ ಮುಂದೂಡಲ್ಪಟ್ಟಿದೆ. ಹೀಗಾಗಿ, ದರ್ಶನ್‌ಗೆ ಮತ್ತೆರಡು ದಿನ ರಿಲೀಫ್ ಸಿಕ್ಕಂತೆ ಆಗಿದೆ.‘ದರ್ಶನ್ ಪರ ಕಪಿಲ್ ಸಿಬಲ್ ವಾದ ಮಂಡಿಸಬೇಕಿತ್ತು.. ಆದರೆ, ಅವರಿಗೆ ಬೇರೆ ಪ್ರಕರಣದಲ್ಲಿ ವಾದ ಮಂಡಿಸಬೇಕಿದೆ. ಹೀಗಾಗಿ ಅವರು ಒಂದು ದಿನ ಸಮಯ ಕೇಳಿದ್ದರು. ಇದಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ಕೊಟ್ಟಿದೆ. ಹೀಗಾಗಿ, ಈ ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಲ್ಪಟ್ಟಿದೆ