
Bangalore: ಹೃದಯಾಘಾತ ತಡೆಗೆ ಮಾರ್ಗಸೂಚಿ; ಅಡುಗೆ ಎಣ್ಣೆ ಮರು ಬಳಸದಂತೆ ಸೂಚನೆ
31/07/2025
ರಾಜ್ಯದ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆಯು, ಹೋಟೇಲ್‌ಗಳಿಗೆ ಹೊಸತೊಂದು ಮಾರ್ಗಸೂಚಿ ಪ್ರಕಟಿಸಿದೆ.
ಕೆಟ್ಟ ಕೊಲೆಸ್ಟಾçಲ್‌ಗಳಿಗೆ ಕಾರಣವಾಗುವ ಅಡುಗೆ ಎಣ್ಣೆಯನ್ನು ಮರು ಬಳಕೆ ಮಾಡದಂತೆ ಎಣ್ಣೆ ಉದ್ದಿಮೆದಾರರು, ಬೇಕರಿ ಹಾಗೂ ಹೋಟೇಲ್‌ಗಳಿಗೆ ಖಡಕ್ ನಿರ್ದೇಶನ ನೀಡಿದೆ. ಅಡುಗೆ ಎಣ್ಣೆ ತಯಾರಿಕಾ ಘಟಕದವರು 6 ತಿಂಗಳಿಗೊಮ್ಮೆ ಗುಣಮಟ್ಟ ವಿಶ್ಲೇಷಣೆ ತಪಾಸಣೆ ಮಾಡಿಸಬೇಕು ಎಂದು ಸೂಚಿಸಿದೆ.