
Chikmagalur: ಕಾಡಾನೆ ದಾಳಿ; ಕಾರ್ಮಿಕ ಮಹಿಳೆ ದಾರುಣ ಸಾವು
24/07/2025
ಕಾಡಾನೆ ತುಳಿದು ಕಾರ್ಮಿಕ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಬನ್ನೂರು ಸಮೀಪ ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ವಟ್ಟಪುರ ಸಾಸ್ಟೆಹಳ್ಳಿ ಹಾಲೇಶ್ ಎಂಬವರ ಪತ್ನಿ ಅನಿತಾ (25) ಮೃತಪಟ್ಟವರು. ಬಾಳೆಹೊನ್ನೂರಿನ ಬನ್ನೂರು ಗ್ರಾಮದ ಶಶಿ ಶೇಖರ್ ಎಂಬವರ ಕಾಫಿತೋಟದಲ್ಲಿ ಅನಿತಾ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಕಾರ್ಮಿಕರ ಲೈನ್ ಮನೆಗೆ ಹೋಗುವ ವೇಳೆ ಕಾಡಾನೆ ದಾಳಿ ನಡೆಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಅನಿತಾ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.