
Dharmasthala: ಸರಣಿ ಶವಗಳ ಹೂತಿರುವ ಪ್ರಕರಣ; ನ್ಯಾಯಯುತ ತನಿಖೆಗೆ ನಟಿ ರಮ್ಯಾ ಒತ್ತಾಯ
21/07/2025 04:52 AM
ಧರ್ಮಸ್ಥಳ ಗ್ರಾಮದಲ್ಲಿ ಸರಣಿ ಶವಗಳ ಹೂತ ಪ್ರಕರಣಕ್ಕೆ ಸಂಬ0ಧಿಸಿದ0ತೆ ನ್ಯಾಯಯುತ ತನಿಖೆಯಾಗಬೇಕೆಂದು ನಟಿ ರಮ್ಯಾ ಆಗ್ರಹಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ನಟಿ ರಮ್ಯಾ, ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಮತ್ತು ಮಹಿಳೆಯರ ನಾಪತ್ತೆ ಘಟನೆಗಳ ಬಗ್ಗೆ ತಿಳಿದು ಆಘಾತವಾಗಿದೆ. ಧರ್ಮಸ್ಥಳ ಪೂಜಾ ಸ್ಥಳವಾಗಿದ್ದು, ಕರ್ನಾಟಕದ ಜನರು ಇದನ್ನು ಹೆಚ್ಚು ಪೂಜಿಸುತ್ತಾರೆ. ಈಗಾಗಿ ನ್ಯಾಯಯುತ ತನಿಖೆ ನಡೆಯುತ್ತದೆ ಎಂದು ಭಾವಿಸಿರುವುದಾಗಿ ಪೋಸ್ಟ್ ಮಾಡಿದ್ದಾರೆ.