
Dharmasthala: ಶವಗಳ ಹೂತಿರುವ ಪ್ರಕರಣ; ಮೊದಲು ಗುರುತಿಸಿದ ಜಾಗದಲ್ಲಿ ಸಿಗದ ಕಳೇಬರ
29/07/2025
ಧರ್ಮಸ್ಥಳದ ಅರಣ್ಯದಲ್ಲಿ ಸರಣಿ ಶವಗಳ ಹೂತಿರುವ ಪ್ರಕರಣಕ್ಕೆ ಸಂಬ0ಧಿಸಿ ದೂರುದಾರ ಗುರುತಿಸಿದ ಸ್ಥಳದಲ್ಲಿ ಅಗೆದಿದ್ದು, ಯಾವುದೇ ಕಳೇಬರ ಸಿಕ್ಕಿಲ್ಲ. ಹೀಗಾಗಿ ಜೆಸಿಬಿ ಮೂಲಕ ಮಣ್ಣನ್ನು ಅಗೆದು ಕಳೇಬರಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಜುಲೈ 28ರಂದು ಧರ್ಮಸ್ಥಳದ ಅರಣ್ಯದಲ್ಲಿ 13 ಕಡೆಗಳಲ್ಲಿ ಶವಗಳನ್ನು ಹೂತು ಹಾಕಿರುವ ಬಗ್ಗೆ ದೂರುದಾರ ಗುರುತಿಸಿದ್ದನು. ಅದರಂತೆ ಜುಲೈ 29ರಂದು ಸ್ಥಳಗಳನ್ನು ಅಗೆಯಲು ಕಾರ್ಮಿಕರನ್ನು ಕರೆಸಲಾಗಿತ್ತು. ಸತತ ಮೂರು ತಾಸುಗಳ ಕಾಲ ಅಗೆಯುವ ಕೆಲಸ ನಡೆದಿದೆ. ಆದರೆ ದೂರುದಾರ ಮೊದಲು ಗುರುತಿಸಿದ ಜಾಗದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ. ಹೀಗಾಗಿ ಜೆಸಿಬಿ ಮೂಲಕ ಮತ್ತಷ್ಟು ಅಗೆಯುವ ಕಾರ್ಯ ನಡೆಸಲು ನಿರ್ಧರಿಸಲಾಗಿದೆ.
ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಎಸ್ಪಿ ಸಿ.ಎ.ಸೈಮನ್, ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಹಾಗೂ ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.