
Mudabidre: ಪವರ್ ಫ್ರೆಂಡ್ಸ್ ಬೆದ್ರದ ಕುಟುಂಬ ಸಮ್ಮಿಲನ; ಪಿಲಿನಲಿಕೆ ಆಮಂತ್ರಣ ಪತ್ರಿಕೆ ಬಿಡುಗಡೆ
29/07/2025
ಪವರ್ ಫ್ರೆಂಡ್ಸ್ ಬೆದ್ರ ಇದರ ಕುಟುಂಬ ಸಮ್ಮಿಲನ ಹಾಗೂ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ನಡೆಯುವ ಪಿಲಿ ನಲಿಕೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮೂಡಬಿದ್ರೆಯ ರಿಂಗ್ ರೋಡ್‌ನ ಪ್ರೀತಮ್ ಗಾರ್ಡನ್ ಹಾಲ್‌ನಲ್ಲಿ ನಡೆಯಿತು.
ಚೌಟರ ಅರಮನೆಯ ಕುಲದೀಪ್ ಎಂ. ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಲವು ಬಾರಿ ರಕ್ತದಾನ ಮಾಡಿದ ಪ್ರವೀಣ್ ಜೈನ ಬೆಳುವಾಯಿ, ಶಿಕ್ಷಕ ನೋರ್ಬಟ್ ಹಾಗೂ ಯಶವಂತ ಎಂ.ಜಿ ಅವರಿಗೆ ಪವರ್ ಫೆಂಡ್ಸ್ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಉದ್ಯಮಿ ಶ್ರೀಪತಿ ಭಟ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮೂಡಬಿದ್ರೆ ಬಿಲ್ಲವ ಸಂಘದ ಅಧ್ಯಕ್ಷ ಸುರೇಶ್ ಕೆ. ಪೂಜಾರಿ, ಸಿಂಚನ ಸಂಸ್ಥೆಯ ಸಂಗೀತಾ ಎಂ. ಪ್ರಭು ಮೊದಲಾದವರು ಇದ್ದರು. ಶಂಕರ್ ಎ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.