
Kadaba/Sullia: ಕೃಷಿತೋಟಗಳಿಗೆ ಕಾಡಾನೆ ಹಿಂಡು ದಾಳಿ; ಅಪಾರ ಬೆಳೆಗಳ ನಾಶ
26/07/2025
ದ.ಕ ಜಿಲ್ಲೆಯ ಕಡಬ ಹಾಗೂ ಸುಳ್ಯದ ಅರಂತೋಡು ಭಾಗಗಳಲ್ಲಿ ಕಾಡಾನೆ ಉಪಟಳ ಮುಂದುವರಿದಿದೆ. ಕೃಷಿಕರ ಕೃಷಿ ತೋಟಗಳಿಗೆ ನುಗ್ಗಿ ಅಪಾರ ಹಾನಿಯನ್ನುಂಟು ಮಾಡುತ್ತಿದೆ.
ಕಡಬ ತಾಲೂಕಿನ ಕುಟ್ರುಪ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ದಿವಾಕರ್ ರೈ ಎಂಬವರ ಕೃಷಿ ತೋಟಗಳಿಗೆ ನುಗ್ಗಿ ಹಾನಿ ಮಾಡಿದೆ. 25ಕ್ಕೂ ಹೆಚ್ಚು ತೆಂಗಿನ ಮರ, ಬಾಳ ಗಿಡಗಳು ಅಡಿಕೆ ಮರಗಳನ್ನು ಪುಡಿಗೈದಿವೆ.