
Kota: ಅಂದರ್ ಬಾಹರ್ ಇಸ್ಪೀಟ್ ಅಡ್ಡೆಗೆ ದಾಳಿ: ಆರು ಮಂದಿ ಆರೋಪಿಗಳು ಅಂದರ್
20/07/2025 11:26 AM
ಬ್ರಹ್ಮಾವರ ತಾಲೂಕಿನ ಅಚ್ಲಾಡಿ ಗ್ರಾಮದ ಗರಿಕೆಮಠ ಎಂಬಲ್ಲಿ ಇಸ್ಪೀಟು ಆಡುತ್ತಿದ್ದ 6 ಮಂದಿ ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ರಾಜು ಶೆಟ್ಟಿ(71), ರಮಾನಂದ ಶೆಟ್ಟಿ(21), ರಾಜುಶೆಟ್ಟಿ(57), ಸಂತೋಷ(56), ರಾಜೀವ ಶೆಟ್ಟಿ(65), ಕೃಷ್ಣ(40) ಬಂಧಿತ ಆರೋಪಿಗಳು. ಗರಿಕೆ ಮಠ ರಾಜು ಶೆಟ್ಟಿ ಎಂಬವರ ಮನೆಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕೋಟ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಬಂಧಿತರಿAದ 15,4550 ರೂಪಾಯಿ ನಗದು, ಮೂರು ಕಾರು, 2 ಸ್ಕೂಟರ್, ಒಂದು ರೌಂಡ್ ಟೇಬಲ್, ಇಸ್ಪೀಟ್ ಎಲೆಗಳು ಸಹಿತ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.