
Manipal: 5 ಕಡೆಗಳಲ್ಲಿ ವಾಹನ ತಪಾಸಣೆ;ನಿಯಮ ಉಲ್ಲಂಘಿಸಿದವರಿಗೆ ದಂಡ
20/07/2025 11:41 AM
ಉಡುಪಿ ನಗರದಲ್ಲಿ ಜುಲೈ 19ರ ರಾತ್ರಿ ದಿಢೀರ್ ಕಾರ್ಯಾಚರಣೆ ನಡೆಸಿದ ಪೊಲೀಸರು ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 5 ಸ್ಥಳಗಳಲ್ಲಿ ಪೊಲೀಸರು ನಾಕಾ ಬಂಧಿ ಹಾಕಿ, ವಿಶೇಷ ತಪಾಸಣೆ ನಡೆಸಿದ್ರು.
ಈ ವೇಳೆ ನಿಯಮ ಉಲ್ಲಂಘೀಸಿದ 18 ಕಾರುಗಳು, 3 ಬೈಕ್ ಸೇರಿದಂತೆ 21 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಕೇಸ್ ಹಾಕಲಾಗಿದೆ.ನಿಯಮ ಉಲ್ಲಂಘಿಸಿದ 10 ವಾಹನಗಳಿಗೆ ಸ್ಥಳದಲ್ಲೇ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ಸೂಚನೆಯಂತೆ, ಡಿವೈಎಸ್ಪಿ, ಮಣಿಪಾಲ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಉಡುಪಿ ನಗರ, ಉಡುಪಿ ಸಂಚಾರ, ಮಲ್ಪೆ ಹಾಗೂ ಮಣಿಪಾಲ ಪೊಲೀಸರು ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡರು.