
Kundapura: ಪಿಕಪ್ ಮೇಲೆ ಉರುಳಿ ಬಿದ್ದ ಮರ; ಚಾಲಕ ಗಂಭೀರ
24/07/2025
ಚಲಿಸುತ್ತಿದ್ದ ಪಿಕಪ್ ವಾಹನದ ಮೇಲೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದು ಚಾಲಕ ಗಂಭೀರ ಗಾಯಗೊಂಡ ಘಟನೆ ಕುಂದಾಪುರ ಕಾಳಾವರ ಗ್ರಾಮದ ಕಟ್ಕೇರಿ ಶಾಲೆ ಸಮೀಪ ನಡೆದಿದೆ.
ಗಂಭೀರ ಗಾಯಗೊಂಡ ಚಾಲಕನನ್ನು ಆನಗಳ್ಳಿಯ ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ. ಚಾಲಕ ಹರೀಶ್ ಅವರು ತಮ್ಮ ಪಿಕಪ್ ವಾಹನದಲ್ಲಿ ಮಲ್ಪೆಯಿಂದ ಮೀನು ತರಲೆಂದು ಹೊರಟಿದ್ದ ವೇಳೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಘಟನೆಯಿಂದ ಪಿಕಪ್ ವಾಹನ ಸಂಪೂರ್ಣ ಹಾನಿಗೀಡಾಗಿದೆ. ತಕ್ಷಣವೇ ಸ್ಥಳೀಯರು ಸೇರಿ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿದರು.