
Kundapura: ಲಯನ್ಸ್ ಕ್ಲಬ್ ವೇಟ್ ಝೋನ್ ಪದಗ್ರಹಣ
27/07/2025
ಲಯನ್ಸ್ ಕ್ಲಬ್ ಕುಂದಾಪುರ ವೇಟ್‌ಝೋನ್ ಇದರ 2025-26 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಕೋಣಿ ರೋಡ್ ನ ಫಿಲೋಮಿನಾ ಕಮರ್ಷಿಯಲ್ ಕಾಂಪ್ಲೇಕ್ಸ್ ಸಭಾಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ವಿಜಯ್ ಭಂಡಾರಿ, ಕಾರ್ಯದರ್ಶಿಯಾಗಿ ಸುಧೀರ್ ನಾಯಕ್, ಖಜಾಂಚಿಯಾಗಿ ಹುಸೇನ್ ಹೈಕಾಡಿ ಅಧಿಕಾರ ಸ್ವೀಕರಿಸಿದರು.
ಲಯನ್ಸ್ ಜಿಲ್ಲೆ 317 ಸಿಯ ದ್ವಿತೀಯ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭ ಲಯನ್ಸ್ ಅಂತರಾಷ್ಟ್ರೀಯ ಅಧ್ಯಕ್ಣ ಎ. ಪಿ. ಸಿಂಗ್ ಅವರ ಮಿಷನ್ -1.5 ಮಿಲಿಯನ್ ಅಭಿಯಾನದಡಿ ಐವರು ಹೊಸ ಸದಸ್ಯರನು ಸೇರ್ಪಡೆಗೊಳಿಸಲಾಯಿತು.
ಎಕ್ಸಟೆನ್ಶನ್ ಚೆರ್ ಪರ್ಸನ್ ರೋವನ್ ಡಿ ಕೋಸ್ಟಾ, ರೀಜನ್ ಚೆರ್ ಪರ್ಸನ್ ರಜತ್ ಹೆಗ್ಡೆ, ರೀಜನ್ ಸೆಕ್ರೆಟರಿ ಏಕನಾಥ್ ಬೋಳಾರ್, ಜೋನ್ ಚೆರ್ ಪರ್ಸನ್ ವಸಂತ್ ರಾಜ್ ಶೆಟ್ಟಿ ಉಪಸ್ಥಿತರಿದ್ದರು.