
Mangalore: ಇಳಿಯುವ ವೇಳೆ ಬಸ್ಸಿನಿಂದ ಬಿದ್ದ ವಿದ್ಯಾರ್ಥಿನಿ; ಚಿಕಿತ್ಸೆ ಫಲಿಸದೆ ಸಾವು
26/07/2025
ಬಸ್ಸಿನಿಂದ ಇಳಿಯುವ ವೇಳೆ ರಸ್ತೆಗೆ ಬಿದ್ದು ಗಾಯಗೊಂಡಿದ್ದ ವೈದ್ಯಕೀಯ ವಿದ್ಯಾರ್ಥಿನಿಯೊಬ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಶುಕ್ರವಾರ ಇಂಟರ್ನ್ ಶಿಪ್ ಗೆ ಎಂದು ಇಂಡಿಯಾನಾ ಆಸ್ಪತ್ರೆಗೆ ತೆರಳುವಾಗ ಬಸ್ಸಿನಿಂದ ಇಳಿಯುವ ವೇಳೆ ಕಾಲುಜಾರಿ ಬಿದ್ದು ತಲೆಗೆ ಗಂಭೀರ ಗಾಯಗಳೊಂದಿಗೆ ಅಸ್ವಸ್ಥಳಾಗಿದ್ದ ಮೂಲತಃ ಕಾಪು ಮೂಳೂರಿನ ಶಾಹಿದಾ (21) ಎಂಬಾಕೆಯನ್ನು ಬಸ್ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಒಮೆಗಾ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ರಾತ್ರಿಯೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟರೆಂದು ತಿಳಿದು ಬಂದಿದೆ.