
Udupi: ಜು.27ರಂದು ಆಟಿಡೊಂಜಿ ಕೂಟ, ಆಟಿ ತಿಂಗಳ ಆಹಾರ ಪ್ರಾತ್ಯಕ್ಷಿಕೆ ; ಭರದ ಸಿದ್ಧತೆ
26/07/2025
ಎನ್.ಸಿ ಯೂತ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ಹಾಗೂ ಇತರ ಸಂಘ ಸಂಸ್ಥೆ ಆಶ್ರಯದಲ್ಲಿ ಜುಲೈ 27ರ ಭಾನುವಾರ ಆಟಿಡೊಂಜಿ ಕೂಟ, ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಅಂಬಲಪಾಡಿ ಬಂಕೇರಕಟ್ಟ ಅಂಗನವಾಡಿ ಕೇಂದ್ರ ಬಳಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಆಟಿ ತಿಂಗಳ ಆಹಾರ ಪ್ರಾತ್ಯಕ್ಷಿಕೆ ಬಳಿಕ ಸಹಭೋಜನ ನಂತರ ಮಧ್ಯಾಹ್ನ 2 ಗಂಟೆಗೆ ಕೆಸರು ಗದ್ದೆ ಕ್ರೀಡಾಕೂಟ ನಡೆಯಲಿದೆ. ಜುಲೈ 27ರಂದು ನಡೆಯಲಿರುವ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಭರದ ಸಿದ್ಧತೆ ನಡೆದಿದೆ. ತೆಂಗಿನ ಗರಿಗಳಿಂದ ಅಲಂಕರಿಸಿದ ವೇದಿಕೆ ಒಂದೆಡೆ ಸಿದ್ಧವಾದರೆ ಮತ್ತೊಂದೆಡೆ ಕ್ರೀಡಾಕೂಟಕ್ಕೆ ಕೆಸರು ಗದ್ದೆಯನ್ನು ಹದಗೊಳಿಸಲಾಗಿದೆ. ಟ್ರಾö್ಯಕ್ಟರ್‌ನಲ್ಲಿ ಗದ್ದೆಯನ್ನು ಕ್ರೀಡಾಕೂಟಕ್ಕೆ ಅಣಿಗೊಳಿಸಲಾಗಿದೆ,