
Mangalore: ಯುವ ಉದ್ಯಮಿ ಆತ್ಮಹತ್ಯೆ; ಕಾರಣ ನಿಗೂಢ, ಪೊಲೀಸರಿಂದ ಪರಿಶೀಲನೆ
22/07/2025
ಮಂಗಳೂರಿನ ಯುವ ಉದ್ಯಮಿ ಹೋಟೆಲ್ ಹಾಗೂ ಇನ್ನಿತರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಯುವಕ ನಿತಿನ್ ಸುವರ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಿಜೆಪಿ ಹಾಗೂ ಮಂಗಳೂರು ಉತ್ತರ ಶಾಸಕ ಡಾ. ಭಾರತ್ ಶೆಟ್ಟಿ ಯವರರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ನಿತಿನ್ ಸುವರ್ಣ ಅವರು ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.