NewDelhi: ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ರಾಜೀನಾಮೆ;  ರಾಷ್ಟ್ರಪತಿ ಮುರ್ಮು ಅಂಗೀಕಾರ

NewDelhi: ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ರಾಜೀನಾಮೆ; ರಾಷ್ಟ್ರಪತಿ ಮುರ್ಮು ಅಂಗೀಕಾರ


ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ. 


ಅನುಮೋದನೆಯ ನಂತರ, ಗೃಹ ಸಚಿವಾಲಯವು ಜಗದೀಪ್ ಧನ್‌ಕರ್ ಅವರ ರಾಜೀನಾಮೆಗೆ ಸಂಬ0ಧಿಸಿದ0ತೆ ತಕ್ಷಣದಿಂದ ಜಾರಿಗೆ ಬರುವಂತೆ ಅಧಿಸೂಚನೆಯನ್ನು ಹೊರಡಿಸಿದೆ. ಜುಲೈ 22ರಂದು ರಾಜ್ಯಸಭೆಯು ಮಧ್ಯಾಹ್ನ 12 ಗಂಟೆಗೆ ಪ್ರಶ್ನೋತ್ತರ ಅವಧಿಗಾಗಿ ಸಭೆ ಸೇರಿದ ಕೂಡಲೇ, ಸಭಾಪತಿ ಸ್ಥಾನದಲ್ಲಿದ್ದ ಘನಶ್ಯಾಮ್ ತಿವಾರಿ, ಅಧಿಸೂಚನೆಯ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ‘ಗೃಹ ಸಚಿವಾಲಯವು ಜುಲೈ 22, 2025 ರ ಅಧಿಸೂಚನೆಯ ಮೂಲಕ, ಸಂವಿಧಾನದ 67 (ಎ) ವಿಧಿಯ ಅಡಿಯಲ್ಲಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಿಳಿಸಿದೆ’ ಎಂದು ತಿವಾರಿ ಘೋಷಿಸಿದರು. ಭಾರತದ ಉಪರಾಷ್ಟ್ರಪತಿಗಳು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿದ್ದಾರೆ. 



Ads on article

Advertise in articles 1

advertising articles 2

Advertise under the article