
Puttur: ತಲವಾರು ಹಿಡಿದು ವ್ಯಕ್ತಿ ಓಡಾಟ; ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ
15/07/2025 06:29 AM
ಸಾರ್ವಜನಿಕ ಸ್ಥಳದಲ್ಲಿ ತಲವಾರ್ ಹಿಡಿದು ಸಾರ್ವಜನಿಕರಿಗೆ ಬೆದರಿಕೆಯೊಡ್ಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹಾಸನ ಮೂಲದ, ಪ್ರಸ್ತುತ ಬಂಟ್ವಾಳದಲ್ಲಿ ವಾಸವಾಗಿರುವ ರಾಜು (45) ಎಂದು ಗುರುತಿಸಲಾಗಿದೆ. ಆರೋಪಿಯು ಬೊಳುವಾರಿನಲ್ಲಿ ತಲವಾರನ್ನು ಶರ್ಟ್ ಹಿಂಬದಿಗೆ ಸಿಕ್ಕಿಸಿ ಪ್ರದರ್ಶನ ಮಾಡುತ್ತಿದ್ದಾಗ ಅದು ನೆಲಕ್ಕೆ ಬಿದ್ದಿದೆ. ಮಾರಕಾಸ್ತ್ರವನ್ನು ಕಂಡ ಸಾರ್ವಜನಿಕರು ಆತನನ್ನು ಸುತ್ತುವರಿದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ರಾಜೇಶ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಲವಾರನ್ನು ಹರಿತಗೊಳಿಸಲೆಂದು ಕಮ್ಮಾರನ ಬಳಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.