Udupi: ಕ್ರೇನ್ ಬಳಸಿ ಅಪಾಯಕಾರಿ ಸಿಗ್ನಲ್ ಲೈಟ್ ಕಂಬಗಳ ತೆರವು
29/07/2025
ಉಡುಪಿ ನಗರದ ರಸ್ತೆಗಳ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ನಿರುಪಯುಕ್ತ ಸಿಗ್ನಲ್ ಲೈಟ್ ಕಂಬಗಳ ತೆರವು ಕಾರ್ಯಾಚರಣೆ ಇಂದು ನಡೆಯಿತು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್ ನಿರ್ದೇಶನದಂತೆ ಕ್ರೇನ್ ಬಳಸಿ ಸಿಗ್ನಲ್ ಲೈಟ್ ಕಂಬಗಳನ್ನು ತೆರವು ಮಾಡಲಾಯಿತು. ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಜಿಲ್ಲಾಡಳಿತವು ಈ ಹಿಂದೆ ಉಡುಪಿ ನಗರದ ಮುಖ್ಯ ರಸ್ತೆಗಳ ಪಕ್ಕದಲ್ಲಿ ಸಿಗ್ನಲ್ ಲೈಟ್ ಕಂಬಗಳನ್ನು ಅಳವಡಿಸಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಸಿಗ್ನಲ್ ಲೈಟ್‌ಗಳು ತುಕ್ಕು ಹಿಡಿದು, ನಿಷ್ಪçಯೋಜಕವಾಗಿವೆ.
ಹೀಗಾಗಿ ಸಿಗ್ನಲ್ ಲೈಟ್ ಕಂಬಗಳನ್ನು ತೆರವು ಮಾಡಲಾಗಿದೆ. ಉಡುಪಿ ಸಂಚಾರಿ ಠಾಣಾ ಪೊಲೀಸರು ವಾಹನ ಸಂಚಾರ ನಿಯಂತ್ರಿಸಿ, ತೆರವು ಕಾರ್ಯಾಚರಣೆಗೆ ಸಹಕರಿಸಿದರು.