Udupi: ಗಾಳಿ-ಮಳೆಗೆ ಮನೆ ಕುಸಿತ; ಶಾಸಕ ಯಶ್‌ಪಾಲ್ ಸುವರ್ಣ ಭೇಟಿ

Udupi: ಗಾಳಿ-ಮಳೆಗೆ ಮನೆ ಕುಸಿತ; ಶಾಸಕ ಯಶ್‌ಪಾಲ್ ಸುವರ್ಣ ಭೇಟಿ


ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಉಡುಪಿಯ ಕೆಂಜೂರು ಮತ್ತು ವಾರಂಬಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಕುಸಿದಿದೆ, ಕೆಂಜೂರು ಗ್ರಾಮದ ಗೋಪಾಲ ನಾಯ್ಕ, ದಾಮೋದರ ನಾಯ್ಕ್ ಅವರ ಮನೆಗಳಿಗೆ ಮಳೆಯಿಂದಾಗಿ ಹಾನಿಯಾಗಿದೆ. ವಾರಂಬಳ್ಳಿ ಗ್ರಾಮದ ಕಿಣಿಯರಬೆಟ್ಟುವಿನಲ್ಲಿ ಗಿರಿಜಾ ಮತ್ತು ಯಶೋಧ ಮನೆಗೆ ಮರ ಬಿದ್ದು ನಷ್ಟ ಉಂಟಾಗಿದೆ. 


ಮಳೆಯಿಂದಾದ ಪ್ರದೇಶಗಳಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಭೇಟಿ ನೀಡಿದರು. ಮರಬಿದ್ದು ಹಾನಿಗೀಡಾದ ಅವರ ಮನೆಗೆ ಭೇಟಿ ನೀಡಿ ಘಟನೆಯಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿ ವೈಯುಕ್ತಿಕ ನೆಲೆಯಲ್ಲಿ ಪರಿಹಾರ ನೀಡಿದರು. ಸ್ಥಳದಲ್ಲಿಯೇ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಳೆ ಹಾನಿಯಿಂದ ಉಂಟಾದ ಹಾನಿಯ ಬಗ್ಗೆ ತಕ್ಷಣ ವರದಿ ಮಾಡಿ ಪ್ರಾಕೃತಿಕ ವಿಕೋಪದಡಿ ಗರಿಷ್ಟ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.


ಈ ಸಂದರ್ಭದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಸ್ಥಳೀಯ ಮುಖಂಡರಾದ ನಿರಂಜನ್ ಶೆಟ್ಟಿ, ನಿಶಾನ್ ರೈ ಮೊದಲಾದವರು ಉಪಸ್ಥಿತರಿದ್ದರು.






Ads on article

Advertise in articles 1

advertising articles 2

Advertise under the article