ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಕುಂದಬಾರ0ದಾಡಿ ಗ್ರಾಮದ ಮಾಣಿ ಕೊಳಲು ಬಳಿ ಮನೆಯೊಂದು ಕುಸಿದು ಬಿದ್ದು ಅಪಾರ ಹಾನಿ ಉಂಟಾಗಿದೆ. ಮಾಣಿ ಕೊಪ್ಪಲು ನಿವಾಸಿ ರಾಘವೇಂದ್ರ ಜೋಗಿ ಎಂಬವರ ಮನೆಯು ಕುಸಿದಿದೆ, ಘಟನೆಯಿಂದ ಸಂಪೂರ್ಣ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.