
Udupi: PWD ಕ್ವಾಟ್ರಸ್‌ನಲ್ಲಿ ಕಳ್ಳತನ;ಪೊಲೀಸರ ಜಾಕೆಟ್ ತೊಟ್ಟು ಕೈಚಳಕ
20/07/2025 10:51 AM
ಉಡುಪಿ ನಗರ ಠಾಣೆಯ ಆನತಿ ದೂರದಲ್ಲಿರುವ ಮಿಷನ್ ಕಂಪೌ0ಡ್ ಜಂಕ್ಷನ್‌ನಲ್ಲಿರುವ PWD ಕ್ವಾಟ್ರಸ್‌ನಲ್ಲಿ ಸರಣಿ ಕಳ್ಳತನ ನಡೆದಿದೆ. ಜುಲೈ 20ರ ಮುಂಜಾನೆ 4ರಿಂದ 4.30ರ ಸುಮಾರಿಗೆ ಕಳ್ಳತನ ನಡೆದಿದೆ.
ಕರ್ನಾಟಕ ಪೊಲೀಸರ ಜಾಕೆಟ್ ತೊಟ್ಟು ಬಂದಿದ್ದ ಕಳ್ಳರ ತಂಡ, ಮನೆಯ ಬೀಗ ಮುರಿದು ಒಳನುಗ್ಗಿದೆ. ಮೂರು ಮನೆಗಳಿಂದ ಚಿನ್ನ, ಬೆಳ್ಳಿಯ ವಸ್ತುಗಳನ್ನು ಕಳವುಗೈದಿದ್ದಾರೆ. ಕಳ್ಳರ ಚಹರೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಳೆದ ವರ್ಷವೂ ಇದೇ ವಸತಿ ಸಮುಚ್ಚಯದಲ್ಲಿ ಕಳ್ಳತನ ನಡೆದಿತ್ತು. ಕಳೆದ ವರ್ಷ ಕಳವು ಕೃತ್ಯ ನಡೆದ ನಂತರ ವಸತಿ ಸಮುಚ್ಚಯಕ್ಕೆ ಸಿಸಿ ಕ್ಯಾಮರಾ ಅಳವಡಿಸಿದ್ದರು. ಆರೋಪಿಗಳ ಸುಳಿವು ಲಭ್ಯವಾಗಿದ್ದು, ಪೊಲೀಸರು ಶೀಘ್ರದಲ್ಲೇ ಬಂಧನದ ಕುರಿತು ಮಾಹಿತಿ ನೀಡಲಿದ್ದಾರೆ. ಉಡುಪಿ ನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.