
Kasaragod: ಕಡಲ್ಕೊರೆತ ಉಲ್ಬಣ; ತೃಕನ್ನಾಡು ದೇಗುಲದತ್ತ ಅಪ್ಪಳಿಸುವ ಅಲೆಗಳು
01/08/2025
ನಿರಂತರವಾಗಿ ಸುರಿದ ಮಳೆಯಿಂದಾಗಿ ಕಾಸರಗೋಡಿನ ಬೇಕಲ ಬಳಿ ಕಡಲ್ಕೊರೆತ ಉಂಟಾಗಿದೆ. ಕೋಟಿಕುಲಂ ತೃಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಾಲಯದ ಮುಂಭಾಗ ಸಮುದ್ರದ ನೀರು ನುಗ್ಗಿದೆ.
ಕಾಸರಗೋಡು ಕಾಂಞಗಾಡು ರಾಜ್ಯ ಹೆದ್ದಾರಿ ಬದಿಯ ತನಕ ಅಲೆಗಳು ಅಪ್ಪಳಿಸಿ ನೀಡು ನುಗ್ಗಿವೆ. ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಕಡಲ್ಕೊರೆತ ಸಮಸ್ಯೆ ಇಲ್ಲಿ ಸಾಮಾನ್ಯವಾಗಿದೆ. ಕಳೆದ 2 ವರ್ಷಗಳ ಹಿಂದೆ ಎರಡು ದೋಣಿಗಳು ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾಗಿದ್ದವು.
ಈ ಭಾಗದಲ್ಲಿ ಉಂಟಾಗುವ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಈ ಭಾಗದ ಜನರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.