
Udupi: ಲಯನ್ಸ್ ಕ್ಲಬ್ಬುಗಳ ಸೇವೆಗೆ ಸರಿಸಾಠಿಯಿಲ್ಲ: ನಟ ವಿಜಯ ರಾಘವೇಂದ್ರ
ಸಮಾಜ ಸೇವಾ ಮನೋಭಾವ, ಮಾನವೀಯತೆ ಹಾಗೂ ಭಾವೈಕ್ಯತೆ ಮೂಡಿಸುವಲ್ಲಿ ಲಯನ್ಸ್ ಕ್ಲಬ್ ಗಳಿಗೆ ಸಾಠಿಯಾಗುವ ಸಂಘಟನೆ ಇನ್ನೊಂದಿಲ್ಲ ಎಂದು ಚಿತ್ರನಟ ವಿಜಯ್ ರಾಘವೇಂದ್ರ ಅಭಿಪ್ರಾಯಪಟ್ಟರು.
ಉಡುಪಿ ಕಲ್ಸಂಕದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಶನಿವಾರ ಲಯನ್ಸ್ ಜಿಲ್ಲೆ 317ಸಿಯ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಹಾಗೂ ಅವರ ಸಂಪುಟ ಸದಸ್ಯರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿಯ ಜನರೊಂದಿಗೆ ಉಡುಪಿಯೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ. ಮಂಗಳೂರು ನನ್ನ ಪತ್ನಿಯ ಊರು ಎಂದರು. 'ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು.. ರಾಘವೇಂದ್ರ' ಗೀತೆ ಹಾಡಿ ಜನಮನ ರಂಜಿಸಿದೆರು.
ಲಯನ್ಸ್ ಇಂಟರ್ ನ್ಯಾಷನಲ್ ಮಾಜಿ ಅಂತಾರಾಷ್ಟ್ರೀಯ ನಿರ್ದೇಶಕ ಆರ್. ಸಂಪತ್ ಪ್ರತಿಜ್ಞಾ ವಿಧಿ ಬೋಧಿಸಿ ಪದಗ್ರಹಣ ನೆರವೇರಿಸಿದರು. ಸಪ್ನಾ ಸುರೇಶ್ ಮಾತನಾಡಿ,
ಬಡವರ ಅಭಿವೃದ್ಧಿ, ಶಿಕ್ಷಣ, ಮಧುಮೇಹ, ಯುವಜನ ಸಂಬಂಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನೆರಳು ಕಾರ್ಯಕ್ರಮದಡಿ ಬೀದಿ ಬದಿ ವ್ಯಾಪಾರಸ್ಥರಿಗೆ 500 ಛತ್ರಿಗಳ ವಿತರಣೆ, 34.50 ಲಕ್ಷ ರೂ. ವೆಚ್ಚದಲ್ಲಿ ಶುದ್ದಜಲ ಯೋಜನೆಯಡಿ ಶಾಲೆಗಳಿಗೆ ಕುಡಿಯುವ ನೀರಿನ ಘಟಕವನ್ನು ನೀಡಲು ಯೋಜಿಸಿರುವುದಾಗಿ ತಿಳಿಸಿದರು.
ಮಾಜಿ ಅಂತಾರಾಷ್ಟ್ರೀಯ ನಿರ್ದೇಶಕ ವಿ.ವಿ. ಕೃಷ್ಣ ರೆಡ್ಡಿ, ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಎನ್. ಮೋಹನ್ ಕುಮಾರ್, ಪ್ರಥಮ ಉಪ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಜಿಲ್ಲಾ ಸಂಪುಟ ಕಾರ್ಯದರ್ಶಿ ಶಾಲಿನಿ ಬಂಗೇರ ಶುಭಾಶಂಸನೆಗೈದರು.
ಜಿಲ್ಲಾ ಲಯನ್ಸ್ ಸದಸ್ಯರ ವಿವರಗಳನ್ನೊಳಗೊಂಡ ಲಯನ್ಸ್ ಜಿಲ್ಲಾ ಡೈರೆಕ್ಟರಿಯನ್ನು ಬಿಡುಗಡೆಗೊಳಿಸಲಾಯಿತು.
ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಪ್ರಭು, ನಿಕಟಪೂರ್ವ ಮಾಜಿ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್, ಜಿಲ್ಲಾ ಸಂಪುಟ ಕೋಶಾಧಿಕಾರಿ
ಶಶಿಧರ್ ಶೆಟ್ಟಿ, ಲಿಯೋ ಜಿಲ್ಲಾಧ್ಯಕ್ಷ ಚಿರಾಗ್ ಪೂಜಾರಿ, ಕೋಶಾಧಿಕಾರಿ ರಾಧಾಕೃಷ್ಣ ಮೆಂಡನ್, ಅತಿಥೇಯ ಲಯನ್ಸ್ ಕ್ಲಬ್ ಪರ್ಕಳದ ಅಧ್ಯಕ್ಷ ಶ್ರೀವತ್ಸ ಯು.ಕೆ., ಕಾರ್ಯದರ್ಶಿ ಸೂರಜ್ ಬಾಳಿಗಾ, ಕೋಶಾಧಿಕಾರಿ ಭಗೀರಥ್ ಎಂ. ಸಾಲ್ಯಾನ್, ಉಡುಪಿ, ದಾವಣಗೆರೆ, ಶಿವಮೊಗ್ಗ ಚಿತ್ರದುರ್ಗ ಜಿಲ್ಲೆಗಳ ಲಯನ್ಸ್ ಸದಸ್ಯರು ಭಾಗವಹಿಸಿದ್ದರು. ಪದಗ್ರಹಣ ಸಮಿತಿ ಅಧ್ಯಕ್ಷ ಪದ್ಮನಾಭ ಭಂಡಾರಿ ಸ್ವಾಗತಿಸಿ, ಕಾರ್ಯದರ್ಶಿ ಸಿದ್ದರಾಜು ವಂದಿಸಿದರು. ರವಿರಾಜ್ ನಾಯಕ್, ರಘುನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿದರು.