
Karwar: ಕುಮಟಾ ಬಿಜೆಪಿ ಶಾಸಕ ದಿನಕರ್ ಶೆಟ್ಟಿ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ
Friday, September 26, 2025
ಕುಮಟಾ ಬಿಜೆಪಿ ಶಾಸಕ ದಿನಕರ್ ಶೆಟ್ಟಿ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಧಾರವಾಡ ಕೋರ್ಟ್ ತೀರ್ಪು ನೀಡಿದೆ.
2023 ರ ವಿಧಾನಸಭೆ ಚುನಾವಣೆಯಲ್ಲಿ 673 ಮತಗಳ ಅಲ್ಪ ಮತದಿಂದ ಗೆಲುವು ಕಂಡಿದ್ದ ಬಿಜೆಪಿ ಶಾಸಕ ದಿನಕರ್ ಶೆಟ್ಟಿಯ ಆಯ್ಕೆ ಪ್ರಶ್ನಿಸಿ ಅಲ್ಪ ಮತದಲ್ಲಿ ಪರಾಭವಗೊಂಡಿದ್ದ ಜೆಡಿಎಸ್‌ನ ಸೂರಜ್ ಸೂನಿ ಎರಡು ವರ್ಷದ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದರು. ದೂರಿನ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಸೂರಜ್ ಸೋನಿ ಅವರ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ್ ಶೆಟ್ಟಿ 59,966 ಮತ ಗಳಿಸಿದ್ದರು. ಜೆಡಿಎಸ್‌ನ ಸೂರಜ್ ನಾಯ್ಕ ಸೋನಿ 59,293 ಮತ ಗಳಿಸಿದ್ದರು. 673 ಮತದಲ್ಲಿ ಬಿಜೆಪಿ ದಿನಕರ್ ಶೆಟ್ಟಿ ಗೆಲವು ಕಂಡಿದ್ದರು. ಈ ಗೆಲುವನ್ನು ಎತ್ತಿ ಹಿಡಿದ ಧಾರವಾಡ ಹೈಕೋರ್ಟ್, ಈ ಆದೇಶ ಮಾಡಿದೆ.