-->
Udupi: ಸೈಫುದ್ದೀನ್ ಕೊಲೆ ಪ್ರಕರಣ; ಮೂವರು ಆರೋಪಿಗಳು ಪೊಲೀಸರಿಗೆ ಶರಣು

Udupi: ಸೈಫುದ್ದೀನ್ ಕೊಲೆ ಪ್ರಕರಣ; ಮೂವರು ಆರೋಪಿಗಳು ಪೊಲೀಸರಿಗೆ ಶರಣು


ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣದ ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 


ಎಕೆಎಂಎಸ್ ಬಸ್ ಚಾಲಕ ಅಬ್ದುಲ್ ಶುಕೂರು, ಫೈಝಲ್ ಹಾಗೂ ಶರೀಫ್ ಆರೋಪಿಗಳಾಗಿದ್ದು, ಪೊಲೀಸರಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ತನಿಖೆಯ ನಿಟ್ಟಿನಲ್ಲಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. 


ಈ ಮೂವರು ಆರೋಪಿಗಳು ಕೂಡಾ ಸೈಫುದ್ದೀನ್ ನ ಜೊತೆಗಿದ್ದವರೇ ಎಂದು ತಿಳಿದು ಬಂದಿದೆ. ಜೊತೆಗಿದ್ದವರಿಗೇ ಸುಪಾರಿ ನೀಡಿ ಕೊಲೆ ಮಾಡಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆರೋಪಿಗಳನ್ನು ಮಲ್ಪೆ ಠಾಣಾ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. 


ಸೆ. 27ರ ಬೆಳಗ್ಗೆ 10 ರಿಂದ 11 ಗಂಟೆ ಸುಮಾರಿಗೆ ಕೊಡವೂರಿನ ಮನೆಯೊಂದರಲ್ಲಿ ಸೈಫುದ್ದೀನ್‌ನನ್ನು ಮೂವರು ಸೇರಿ ಮಾರಕಾಸ್ತçಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಶರಣಾಗಿರುವ ಮೂವರು ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದ್ದು, ಕೊಲೆಗೆ ನಿಖರ ಕಾರಣವೇನು ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 




Ads on article

Advertise in articles 1

advertising articles 2

Advertise under the article