
Udupi: ಸೈಫುದ್ದೀನ್ ಕೊಲೆ ಪ್ರಕರಣ; ಮೂವರು ಆರೋಪಿಗಳು ಕೊಲೆಗೈದಿರುವ ಶಂಕೆ; ಎಸ್ಪಿ ಹರಿರಾಂ (Video)
Saturday, September 27, 2025
ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್‌ನನ್ನು ಮೂವರು ಆರೋಪಿಗಳು ಏಕಕಾಲದಲ್ಲಿ ಮಾರಕಾಯುಧಗಳಿಂದ ಕೊಲೆ ನಡೆಸಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಬೆಳಗ್ಗೆ 10ರಿಂದ 11 ಗಂಟೆಯ ನಡುವೆ ಈ ದುಷ್ಕೃತ್ಯ ನಡೆದಿದ್ದು, ಆರೋಪಿಗಳು ಎಕೆಎಂಎಸ್ ಖಾಸಗಿ ಬಸ್ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೊಲೆಯಾದ ಸೈಫ್ ಮೇಲೆ 18 ಕ್ರಿಮಿನಲ್ ಕೇಸುಗಳಿದ್ದು, ಹಿರಿಯಡ್ಕ ಠಾಣೆ ಮತ್ತು ಉಡುಪಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಅಲ್ಲದೇ ಸೈಫ್ ಎರಡು ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.