.jpeg)
Udupi: ಅಲೆವೂರಿನ ಶಾಂತಿನಿಕೇತನ ಶಾಲೆಯಲ್ಲಿ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ‘ಯುರೇಕಾ!’ ಉದ್ಘಾಟನೆ
Friday, September 26, 2025
ಉಡುಪಿ ಮೂಲದ ಸಾಫ್ಟ್ವೇರ್ ಉದ್ಯಮಿ ಪ್ರಕಾಶ್ ಪೈ ಕೊಚ್ಚಿಕಾರ್ ಅವರು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅಲೆವೂರು ಶಾಂತಿನಿಕೇತನ ಆಂಗ್ಲಮಾದ್ಯಮ ಶಾಲೆಗೆ ಕೊಡುಗೆಯಾಗಿ ನೀಡಿರುವ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ‘ಯುರೇಕಾ!’ ಇದರ ಉದ್ಘಾಟನೆ ನಡೆಯಿತು.
ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರ ವಿಭಾಗಗಳನ್ನು ಒಳಗೊಂಡಿರುವ ನೂತನ ಪ್ರಯೋಗಾಲಯವನ್ನು ಸುರೇಶ್ ಪ್ರಭು- ಶಾಲಿನಿ ಪ್ರಭು ದಂಪತಿಗಳು ಉದ್ಘಾಟಿಸಿದರು.
ದೀಪ ಬೆಳಗಿಸಿ ಮಾತನಾಡಿದ ದಾನಿ ಪ್ರಕಾಶ್ ಪೈ ಕೊಚ್ಚಿಕಾರ್ ಅವರು, ವಿಜ್ಞಾನವು ಅಧ್ಯಯನ ವಿಷಯವಾಗಿ ಇಷ್ಟವಿದ್ದರೂ, ಇಷ್ಟವಿಲ್ಲದಿದ್ದರೂ, ದೈನಂದಿನ ಜೀವನದಲ್ಲಿ ವಿಜ್ಞಾನದ ಬಗ್ಗೆ ಕನಿಷ್ಟ ಆಸಕ್ತಿ ಬೆಳೆಸುವುದು ಅನಿವಾರ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅಲೆವೂರು ಶಾಂತಿನಿಕೇತನ ಶಾಲೆಯ ಸಂಚಾಲಕ ಅಲೆವೂರು ದಿನೇಶ್ ಕಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪಾ ಡಿ. ಕಿಣಿ ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಅಲೆವೂರು ಹರೀಶ್ ಕಿಣಿ, ಮಣಿಪಾಲ ರೋಟರಿ ಹಿಲ್ಸ್ ಮಾಜಿ ಅಧ್ಯಕ್ಷ ರಮಾನಂದ ಭಟ್, ಉಡುಪಿ ರೋಟರಿಯ ಮಾಜಿ ಅಧ್ಯಕ್ಷೆ ದೀಪಾ ಭಂಡಾರಿ, ನಿವೃತ್ತ ಬ್ಯಾಂಕರ್ ದಿನೇಶ್ ಭಂಡಾರಿ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಚೈತ್ರ ಕುಮಾರಿ ವಂದಿಸಿದರು. ಶಿಕ್ಷಕಿ ಗಾಯತ್ರಿ ಅರುಣ್ ಕುಮಾರ್ ಕೆ. ಕಾರ್ಯಕ್ರಮ ನಿರೂಪಿಸಿದರು.