
Udupi: ರೌಡಿಶೀಟರ್ ಸೈಫುದ್ದೀನ್ ಕೊಲೆ ಪ್ರಕರಣ; ಸಹಚರ ಸಹಿತ ಶಂಕಿತರ ವಿಚಾರಣೆ
Saturday, September 27, 2025
ಉಡುಪಿಯ ಎಕೆಎಂಎಸ್ ಬಸ್ ಮಾಲಕ, ರೌಡಿಶೀಟರ್ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬ0ಧಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಫುದ್ದೀನ್ ಕುಟುಂಬಿಕರು ನೀಡಿರುವ ಮಾಹಿತಿಯಂತೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸೈಫುದ್ದೀನ್ ಸಹಚರ ಸಹಿತ ಕೆಲ ಶಂಕಿತ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿದ್ದು, ಶೀಘ್ರದಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಸೈಫುದ್ದೀನ್ ಹಣದ ವ್ಯವಹಾರ ಹಾಗೂ ಬಸ್ ವ್ಯವಹಾರಗಳಿಗೆ ಸಂಬಂಧಿಸಿ ಕೆಲವರ ಜೊತೆ ಧ್ವೇಷ ಕಟ್ಟಿಕೊಂಡಿದ್ದು, 2020ರಲ್ಲಿ ಸೈಫುದ್ದೀನ್‌ನ ಕೊಲೆ ಯತ್ನ ನಡೆದಿತ್ತು. ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಸೈಫ್ ಭಾಗಿಯಾಗಿದ್ದ. ಅಲ್ಲದೇ 2020ರಲ್ಲಿ ಮುಂಬೈಯ ಬಾರ್ ಮಾಲೀಕ ವಶಿಷ್ಟ ಯಾದವ್ ಕೊಲೆ ಪ್ರಕರಣದಲ್ಲೂ ಸೈಫುದ್ದೀನ್ ಭಾಗಿಯಾಗಿದ್ದು, ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಇದೀಗ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಘಟನಾಸ್ಥಳಕ್ಕೆ ಉಡುಪಿ ಎಸ್ಪಿ ಹರಿರಾಂ ಶಂಕರ್ ಭೇಟಿ ನೀಡಿ, ಪರಿಶೀಲಿಸಿದ್ದಾರೆ.