
Udupi: ಎಸ್.ಪಿ.ಬಿ. ಸವಿ ನೆನಪು - ಲಯನ್ಸ್ ಗಾಯಕರಿಂದ ಆರ್ಕೆಸ್ಟ್ರಾ
Sunday, September 28, 2025
ಎಸ್.ಪಿ.ಬಿ ಸವಿನೆನಪು ಕಾರ್ಯಕ್ರಮದ ಅಂಗವಾಗಿ ಲಯನ್ಸ್ ಗಾಯಕರಿಂದ ಎಸ್ ಪಿ ಬಿ ಹಾಡುಗಳ ಆರ್ಕೆಸ್ಟ್ರಾ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಿತು. ಲಯನ್ಸ್ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಪ್ರಥಮ ಉಪ ಜಿಲ್ಲಾ ಗವರ್ನರ್ ರಾಜೀವ ಕೋಟ್ಯಾನ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಶಾಲಿನಿ ಬಂಗೇರ, ಲಯನ್ಸ್ ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕ ರಂಜನ್ ಕಲ್ಕೂರ ಉಡುಪಿ, ಉಡುಪಿ ಲಯನ್ಸ್ ಕ್ಲಬ್ ಇದರ ಅಧ್ಯಕ್ಷ ದಿನೇಶ್ ಕಿಣಿ ಉಪಸ್ಥಿತರಿದ್ದರು, ತೇಜಸ್ವಿನಿ ಅನಿಲ್ ರಾಜ್, ದಿನೇಶ್ ಕಡೆಕಾರ್ ಇವರಿಬ್ಬರನ್ನು ಸಂಗೀತ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು. ನಂದ ಕಿಶೋರ್ ಸ್ವಾಗತಿಸಿದರು, ವಿದ್ಯಾಧರಿ ಪ್ರಾರ್ಥಿಸಿದರು. ರವಿರಾಜ್ ನಾಯಕ್ ಹಾಗೂ ಅಮಿತಾಂಜಲಿ ಕಾರ್ಯಕ್ರಮ ನಿರೂಪಿಸಿದರು.
ಗಾಯಕರಾಗಿ ವಿವಿಧ ಲಯನ್ಸ್ ಕ್ಲಬ್ ಗಳ ಸದಸ್ಯರಾದ ಸೂರಜ್ ಬಾಳಿಗ, ವಿದ್ಯಾಧರಿ, ನಂದಕಿಶೋರ್, ಚಿನ್ಮಯಿ ಶೆಣೈ, ಡಾ. ವಿಶ್ವಲತಾ ಸತೀಶ್, ತಿಲಕ ಎಂ. ರಾವ್, ಪ್ರದೀಪ್ ಶೆಟ್ಟಿ, ಪ್ರದೀಪ್ ಶೆಟ್ಟಿ ಪಡ್ಡಾಳ, ವಿಜಯ ಬಾಯಿರಿ, ಸುದರ್ಶನ್ ಸಿ.ಪಿ. ಭಾಗವಹಿಸಿದ್ದರು. ಗೌರವ ಕಲಾವಿದರಾಗಿ ಹಿರಿಯ ಗಾಯಕ ಅಶೋಕ್ ಸಾರಂಗ್ ಪಾಲ್ಗೊಂಡರು. ಕೀ ಬೋರ್ಡ್ ನಲ್ಲಿ ಅಶೋಕ್ ಆಚಾರ್, ತಬಲಾದಲ್ಲಿ ಸುದರ್ಶನ್ ಹಾಗೂ ಡ್ರಮ್ಸ್ ನಲ್ಲಿ ಸಂತೋಷ್ ಸಹಕರಿಸಿದರು.