
Mangalore: ದುಬೈನಲ್ಲಿ ಮೃತಪಟ್ಟ ಉಪ್ಪಿನಂಗಡಿಯ ಯುವಕನ ಮೃತದೇಹ ತಾಯ್ನಾಡಿಗೆ ರವಾನೆ
Saturday, September 27, 2025
ದುಬೈಯಲ್ಲಿ ನಿಧನರಾದ ಉಪ್ಪಿನಂಗಡಿ ಮೂಲದ ವ್ಯಕ್ತಿಯೊಬ್ಬರ ಮೃತದೇಹವನ್ನು ಕೆಸಿಎಫ್ ಯುಎಇ ಮುಖಂಡ, ಸಮಾಜ ಸೇವಕ ಸಮದ್ ಬಿರಾಲಿ ಹಾಗು ಅವರ ತಂಡ ತ್ವರಿತವಾಗಿ ತಾಯ್ನಾಡಿಗೆ ಕಳುಹಿಸಿದೆ.
ಉಪ್ಪಿನಂಗಡಿ ಸಮೀಪದ ನೀರಬೈಲು ನಿವಾಸಿ ತಿಲಕಾನಂದ ಪೂಜಾರಿ ಅವರು ಇತ್ತೀಚೆಗೆ ದುಬೈನಲ್ಲಿ ನಿಧನರಾಗಿದ್ದರು. ದುಬೈನ ಆಸ್ಪತ್ರೆಯೊಂದರ ಶವಾಗಾರದಲ್ಲಿ ಇಡಲಾಗಿದ್ದ ಅವರ ಮೃತದೇಹವನ್ನು ತಾಯ್ನಾಡಿಗೆ ಕಳುಹಿಸಲು ಕಾನೂನಿನ ತೊಡಕುಂಟಾಗಿತ್ತು.
ಈ ವೇಳೆ ಸಾಮಾಜಿಕ ಕಾರ್ಯಕರ್ತ, ಕೆಸಿಎಫ್ ಯುಎಇ ಮುಖಂಡ ಉಚ್ಚಿಲ ಮೂಲದ ಸಮದ್ ಬಿರಾಲಿ ಹಾಗು ಅವರ ತಂಡ, ತ್ವರಿತವಾಗಿ ಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ದುಬೈ ಪೊಲೀಸ್ ಹಾಗು ಸಂಬ0ಧಪಟ್ಟ ಅಧಿಕಾರಿಗಳಿಗೆ ನೀಡಿ, ಮೃತದೇಹವನ್ನು ಮಂಗಳೂರಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.