-->
 Mangalore: 35 ವರ್ಷಗಳ ಬಳಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಯಕ್ಷಗಾನ ಮೇಳ; 50 ಆಟಗಳು ಮುಂಗಡ ಬುಕ್ಕಿಂಗ್

Mangalore: 35 ವರ್ಷಗಳ ಬಳಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಯಕ್ಷಗಾನ ಮೇಳ; 50 ಆಟಗಳು ಮುಂಗಡ ಬುಕ್ಕಿಂಗ್


35 ವರ್ಷಗಳ ಬಳಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಯಕ್ಷಗಾನ ಮೇಳ ಮತ್ತೆ ಪ್ರಾರಂಭವಾಗಲಿದೆ. ಈಗಾಗಲೇ 50ಕ್ಕೂ ಆಟಗಳು ಮುಂಗಡ ಬುಕ್ಕಿಂಗ್ ಆಗಿದೆ ಎಂದು ತಿಳಿದು ಬಂದಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಹೆಸರಿನಲ್ಲಿ ತಿರುಗಾಟ ಪ್ರಾರಂಭಿಸಲಿರುವ ಮೇಳವು, ಸ್ಥಳ ಪುರಾಣದ ಕಥಾಹಂದರ ಹೊಂದಿರುವ ‘ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮಹಾತ್ಮೆ’ ಹಾಗೂ ಸಿ. ರಾಘವೇಂದ್ರ ಕುಂಬ್ಳೆ ವಿರಚಿತ ‘ಸರ್ಪ ಸಂಪತ್ತ್’ ಎಂಬ ಎರಡು ಹೊಸ ಪ್ರಸಂಗಗಳೊಂದಿಗೆ ಪ್ರದರ್ಶನಕ್ಕೆ ಸಿದ್ಧವಾಗಿದೆ. ಹಿಮ್ಮೇಳ ಹಾಗೂ ಮುಮ್ಮೇಳ ಸೇರಿ ಸುಮಾರು 32 ಕಲಾವಿದರು ಇದ್ದಾರೆ. ಬಪ್ಪನಾಡು ಮೇಳ, ಬೆಂಕಿನಾಥೇಶ್ವರ ಮೇಳೆ ಸೇರಿ, ಬೇರೆ ಬೇರೆ ತಿರುಗಾಟ ಮೇಳಗಳಲ್ಲಿದ್ದ ಕಲಾವಿದರು ಕುಕ್ಕೆ ಮೇಳಕ್ಕೆ ಸೇರ್ಪಡೆಗೊಂಡಿದ್ದಾರೆ.

ಡಿಸೆAಬರ್ 5ರಂದು ಕುಕ್ಕೆ ಕ್ಷೇತ್ರದಲ್ಲಿ ಮೊದಲ ಯಕ್ಷಗಾನ ಪ್ರದರ್ಶನ ನೀಡಿ, ನಂತರ ಮೇಳವು ತಿರುಗಾಟಕ್ಕೆ ಮುನ್ನುಡಿ ಬರೆಯಲಿದೆ. ಈಗಾಗಲೇ ಭಕ್ತರು 50ಕ್ಕೂ ಹೆಚ್ಚು ಆಟಗಳು ಮುಂಗಡ ಕಾಯ್ದಿರಿಸಿದ್ದಾರೆ.

ಆದಿಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ನಾಟಕಸಭಾ ಸುಬ್ರಹ್ಮಣ್ಯ ಎಂಬ ಹೆಸರಿನ ಬಯಲಾಟ ಮೇಳವು 1990ರವರೆಗೆ ತಿರುಗಾಟ ನಡೆಸಿತ್ತು. ಪುತ್ತೂರು ಬನ್ನೂರಿನ ಶೀನಪ್ಪ ಭಂಡಾರಿ ಇದನ್ನು ಮುನ್ನಡೆಸುತ್ತಿದ್ದರು. ಅವರಿಗೆ ವಯಸ್ಸಾದ ನಂತರ ಮೇಳದ ತಿರುಗಾಟ ನಿಂತಿತ್ತು. ಇದೀಗ ಯಕ್ಷಗಾನ ಮೇಳ ಮತ್ತೆ ಆರಂಭವಾಗಲಿದೆ. 

Ads on article

Advertise in articles 1

advertising articles 2

Advertise under the article