
Kaup: ಅಪರಿಚಿತ ವಾಹನ ಡಿಕ್ಕಿಯಾಗಿ ದೇಹ ಛಿದ್ರಗೊಂಡ ಮೃತ ವ್ಯಕ್ತಿಯ ಗುರುತು ಪತ್ತೆ
Tuesday, September 30, 2025
ಉಚ್ಚಿಲ ಸಮೀಪ ಅಪರಿಚಿತ ವಾಹನ ಡಿಕ್ಕಿಯಾಗಿ ದೇಹ ಛಿದ್ರಗೊಂಡಿದ್ದ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಸಂತೆ ವ್ಯಾಪಾರಿ, ಬೆಳ್ತಂಗಡಿಯ ಮಡಂತ್ಯಾರು ನಿವಾಸಿ ರಮೇಶ್ ಹೆಗ್ಡೆ(53) ಮೃತರು.
ಇವರು ಉಚಿಲದಲ್ಲಿ ನಡೆಯುತ್ತಿರುವ ದಸರಾದಲ್ಲಿ ಸಂತೆ ವ್ಯಾಪಾರ ನಡೆಸಲು ಬಂದಿದ್ದರು. ಬೆಳಗ್ಗೆ ಬೈಕ್ ನಲ್ಲಿ ತೆರಳುತ್ತಿರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ ರಮೇಶ್ ಅವರ ದೇಹ ಛಿದ್ರಗೊಂಡಿತ್ತು. ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.