
Kundapura: ನಿಶಾಲಿಗೆ ಪ್ರೈಡ್ ಆಫ್ ಇಂಡಿಯಾ- ಮಿಸ್ ಇಂಡಿಯಾ 2025 ಕಿರೀಟ
Thursday, September 25, 2025
ಕುಂದಾಪುರದ ಬೆಡಗಿ ನಿಶಾಲಿ ಕುಂದರ್ ದೆಹಲಿಯ ಪ್ರತಿಷ್ಠಿತ ಡಿ ಕೆ ಪೆಜೆಂಟ್ ಸಂಸ್ಥೆಯವರು ಆಯೋಜಿಸುವ “ಪ್ರೈಡ್ ಆಫ್ ಇಂಡಿಯಾ- ಮಿಸ್ ಇಂಡಿಯಾ 2025” ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ದೆಹಲಿ ರಾಡಿಸನ್ ಬ್ಲೂ ಹೋಟೆಲಿನಲ್ಲಿ ನಡೆದ ‘ಮಿಸ್ ಇಂಡಿಯಾ ಪ್ರೈಡ್ ಆಫ್ ಇಂಡಿಯಾ 2025’ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಬಂದಿದ್ದ 44 ಸ್ಪರ್ಧಿಗಳನ್ನು ಎದುರಿಸಿ ನಿಶಾಲಿ ಈ ಪ್ರತಿಷ್ಠಿತ ಟೈಟಲ್‌ಗೆ ಕೊರಳೊಡ್ಡಿದ್ದಾರೆ. ಪ್ರಸ್ತುತ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆಯುತ್ತಿರುವ ನಿಶಾಲಿ, ಬೆಂಗಳೂರಿನ ಶ್ರೀನಿಧಿ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಉಮೇಶ್ ಕುಂದರ್ ಮತ್ತು ಜಾನಕಿ ಕುಂದರ್ ಅವರ ಪುತ್ರಿ. ನಿಶಾಲಿ ಕಳೆದ 6 ತಿಂಗಳಿನಿ0ದ ಈ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಟ್ಯಾಲೆಂಟ್ ಸುತ್ತಿನಲ್ಲಿ ಈ ನೆಲದ ಹೆಮ್ಮೆಯ ಯಕ್ಷಗಾನ ಪ್ರದರ್ಶನ ನೀಡಿ ಅವರು ಎಲ್ಲರ ಮೆಚ್ಚುಗೆ ಗಳಿಸಿದರು.