Mulki: ಕಟೀಲು ಕ್ಷೇತ್ರದಲ್ಲಿ ಸೇವಾ ದರ ಪರಿಷ್ಕರಣೆ; ಕಾಂಗ್ರೆಸ್‌ನಿಂದ ಧರ್ಮ ಜಾಗೃತಿ ನಡೆ
Saturday, September 27, 2025
ಕಟೀಲು ದೇವಸ್ಥಾನದಲ್ಲಿ ಸೇವಾ ದರ ಪರಿಷ್ಕರಣೆ ಕುರಿತಂತೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೂಲ್ಕಿ ಮೂಡಬಿದ್ರೆ ಕಾಂಗ್ರೆಸ್ ವತಿಯಿಂದ ಧರ್ಮ ಜಾಗೃತಿ ನಡೆ ಕಾರ್ಯಕ್ರಮವು ಎಕ್ಕಾರುವಿನಿಂದ ಕಟೀಲು ದೇಗುಲದವರೆಗೆ ನಡೆಯಿತು.
ಎಕ್ಕಾರು ಕೊಡಮಣಿತ್ತಾಯ ದ್ವಾರದ ಬಳಿ ಪ್ರಾರ್ಥನೆ ನೆರವೇರಿಸಿ, ಕಟೀಲು ಕ್ಷೇತ್ರದವರೆಗೆ ಪಾದಯಾತ್ರೆ ನಡೆಸಲಾಯಿತು. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಡಬಿದ್ರೆ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಜೈನ್ ಶಿರ್ತಾಡಿ ಮೊದಲಾದವರು ಉಪಸ್ಥಿತರಿದ್ದರು. ಈ ವೇಳೆ ದೇವಳದ ಆಡಳಿತ ಮಂಡಳಿಗೆ ಸೇವಾ ದರ ಕಡಿಮೆ ಮಾಡುವಂತೆ ಮನವಿ ಸಲ್ಲಿಸಲಾಯಿತು.