
Kasaragodu: ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್ಯೆ
Wednesday, October 01, 2025
ಕಾಸರಗೋಡಿನ ಡಿವೈಎಫ್ಐ ನಾಯಕಿ, ಯುವ ವಕೀಲೆ ರಂಜಿತಾ(30) ತಮ್ಮ ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡಿವೈಎಫ್‌ಐ ಮಹಿಳಾ ಸಂಘದ ಪ್ರದೇಶ ಸಮಿತಿಯ ಅಧ್ಯಕ್ಷೆ ಮತ್ತು ವಕೀಲೆಯಾಗಿರುವ ರಂಜಿತಾ ಕುಂಬ್ಲೆಯಲ್ಲಿರುವ ತಮ್ಮ ಕಚೇರಿ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತದೇಹದ ಬಳಿ ಒಂದು ಚೀಟಿ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರು ಪತಿ ಮತ್ತು ಮಗುವನ್ನು ಅಗಲಿದ್ದಾರೆ. ಮೃತದೇಹವನ್ನು ಕುಂಬ್ಳೆ ಸೇವಾ ಸಹಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.