
New delhi: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ; ಇಂದಿನಿಂದಲೇ ಪರಿಷ್ಕೃತ ದರ ಜಾರಿ
ಕಳೆದ ಹಲವು ತಿಂಗಳಿನಿಂದ ಕಡಿಮೆಯಾಗಿದ್ದ ವಾಣಿಜ್ಯ ಅನಿಲ ಸಿಲಿಂಡರ್‌ಗಳ ದರ ಮತ್ತೆ ಏರಿಕೆಯಾಗಿದೆ.
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಬಳಸುವ 19 ಕೆಜಿಯ ವಾಣಿಜ್ಯ ಅನಿಲ ಸಿಲಿಂಡರ್‌ಗಳ ದರವನ್ನು 15.50 ರೂ.ನಷ್ಟು ಹೆಚ್ಚಿಸಲಾಗಿದ್ದು, ಅ.1ರಿಂದ ಜಾರಿಗೆ ಬರಲಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ಘೋಷಿಸಿವೆ.
ಗೃಹ ಬಹಳಕೆಗಾಗಿ ಬಳಸುವ 14.2 ಕೆಜಿಯ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕಂಪನಿ ತಿಳಿಸಿದೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸಿಲಿಂಡರ್ ದರ 51.50 ರಷ್ಟು ಕಡಿಮೆಯಾಗಿ 1,580ಕ್ಕೆ ದೊರಕಿತ್ತು. ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ ₹1,595.50, ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ದರ ₹1,547, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ದರ ₹1,700 ಮತ್ತು ₹1,754ಕ್ಕೆ ಏರಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಓಸಿ) ತಿಳಿಸಿದೆ.
ಏಕಾಏಕಿ ಈ ದರ ಏರಿಕೆಯಿಂದಾಗಿ ದೇಶದ ರಾಜಧಾನಿ ಸೇರಿದಂತೆ ಎಲ್ಲೆಡೆ ಸಣ್ಣ ವ್ಯಾಪಾರಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಕಾರಣ ಅವರು ತಮ್ಮ ದೈನಂದಿನ ಕಾರ್ಯಗಳಾದ ಸಣ್ಣ ಅಂಗಡಿಗಳು, ಹೋಟೆಲ್‌ಗಳು ಮತ್ತು ಇತರ ವ್ಯವಹಾರಗಳಿಗಾಗಿ ಈ ಸಿಲಿಂಡರ್‌ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.
ಇನ್ನು ಗೃಹ ಬಳಕೆಗೆ ಉಪಯೋಗಿಸುವ ಸಿಲಿಂಡರ್‌ಗಳ (ಡೊಮೆಸ್ಟಿಕ್) ದರಗಳು ಏಪ್ರಿಲ್‌ನಿಂದ ಯಾವುದೇ ಬದಲಾವಣೆ ಕಂಡಿಲ್ಲ. ಪ್ರಸ್ತುತ, ಪ್ರಮುಖ ನಗರಗಳಲ್ಲಿನ ಗೃಹಬಳಕೆಯ ಸಿಲಿಂಡರ್ ದರಗಳು ದೆಹಲಿ: ₹853, ಚೆನ್ನೈ: ₹868.50, ಕೋಲ್ಕತ್ತಾ: ₹879, ಮುಂಬೈ ₹852.50 ಇದೆ.