-->
ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಿಧನ

ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಿಧನ


ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ, ಇತಿಹಾಸ ಉಪನ್ಯಾಸಕ ಡಾ. ಶ್ರೀಧರ್ ನಾಯ್ಕ್(57) ನಿಧನರಾಗಿದ್ದಾರೆ. 

ಕಳೆದ ಹಲವು ಸಮಯಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಧರ್ ನಾಯ್ಕ್ ಅವರು ಒಂದು ವಾರದಿಂದ ತೀವ್ರ ಅಸ್ವಸ್ಥಗೊಂಡಿದ್ದು, ಕಾಲೇಜಿಗೂ ಹಾಜರಾಗಿರಲಿಲ್ಲ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾ. ಶ್ರೀಧರ್ ಅವರು ಚಿಕಿತ್ಸೆಗೆ ಸ್ಪಂಧಿಸದೇ ನಿಧನ ಹೊಂದಿದ್ದಾರೆ. 

ಮೂಲತಃ ಕಾಸರಗೋಡಿನ ಮಧೂರು ನಿವಾಸಿಯಾಗಿರುವ ಡಾ. ಶ್ರೀಧರ್ ಅವರು ಪುತ್ತೂರಿನ ಕಬಕದಲ್ಲಿ ನೆಲೆಸಿದ್ದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. 

ಪುತ್ತೂರು ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕರಾಗಿದ್ದ ಡಾ. ಶ್ರೀಧರ್ ಅವರು, ವಿ.ಜಿ ಭಟ್ ಅವರ ನಿವೃತ್ತಿಯ ನಂತರ 6 ತಿಂಗಳ ಹಿಂದೆಯಷ್ಟೇ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ಡಾ. ಶ್ರೀಧರ್ ಅವರು ಪ್ರಾಧ್ಯಾಪಕರಾಗಿ, ವಸತಿ ನಿಲಯದ ಮೇಲ್ವಿಚಾರಕರಾಗಿ, ರಾಷ್ಟಿçÃಯ ಸೇವಾ ಯೋಜನೆಯ ಅಧಿಕಾರಿಯಾಗಿ ಕಾಲೇಜಿನ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದರು. ಅವರ ಅಕಾಲಿಕ ನಿಧನಕ್ಕೆ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ಅಪಾರ ವಿದ್ಯಾರ್ಥಿ ಸಮೂಹ ಕಂಬನಿ ಮಿಡಿದಿದೆ. 

Ads on article

Advertise in articles 1

advertising articles 2

Advertise under the article