ನಿರ್ಮಾಣ ಹಂತದ ಫ್ಲೈ ಓವರ್‌ನಲ್ಲಿ ಕಾರು ಚಲಾಯಿಸಿ ಸಿಲುಕಿಕೊಂಡ ಯುವಕ
Monday, November 17, 2025
ಕುಡಿದ ಮತ್ತಿನಲ್ಲಿ ಯುವಕನೋರ್ವ ನಿರ್ಮಾಣ ಹಂತದ ಫ್ಲೈ ಓವರ್ ಮೇಲೆ ಕಾರು ಚಲಾಯಿಸಿ ಬಳಿಕ ಅಂಡರ್‌ಪಾಸ್ ಮತ್ತು ಫ್ಲೈ ಓವರ್ ನಡುವೆ ಸಿಲುಕಿಕೊಂಡ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಕಣ್ಣೂರಿನ ಚಾಲಾ ಬೈಪಾಸ್ ಬಳಿಯ ಅಂಬಲಮ್ ನಿಲ್ದಾಣದಲ್ಲಿರುವ ಅಂಡರ್ ಪಾಸ್ ನಲ್ಲಿ ಈ ಘಟನೆ ನಡೆದಿದೆ. ಕಾರು ಚಾಲಕ ಮಲಪ್ಪುರಂ ಕೊಂಡೊಟ್ಟಿ ಮೂಲದ ಲಸಿಮ್ (29) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಕುಡಿದ ಮತ್ತಿನಲ್ಲಿ ನಿರ್ಮಾಣ ಹಂತದ ಫ್ಲೈ ಓವರ್ ಮೇಲೆ ಕಾರು ಚಲಾಯಿಸಿದ್ದಾನೆ. ನಿಯಂತ್ರಣ ಕಳೆದುಕೊಂಡ ಕಾರು ಅಂಡರ್‌ಪಾಸ್ ಹಾಗೂ ಫ್ಲೈ ಓವರ್ ನಡುವೆ ಇದ್ದ ಜಾಗದಲ್ಲಿ ಸಿಲುಕಿಕೊಂಡಿತು.
ಸ್ಥಳೀಯರೆಲ್ಲಾ ಸೇರಿ ನೇತಾಡುತ್ತಿದ್ದ ಕಾರಿನಿಂದ ಚಾಲಕನನ್ನು ಹೊರತೆಗೆದಿದ್ದಾರೆ. ಕಾರು ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.