ದಲಿತ ಮಹಿಳೆಗೆ ಹಲ್ಲೆ, ಬೆದರಿಕೆ ಆರೋಪ; 15 ಮಂದಿಯ ವಿರುದ್ಧ ಪ್ರಕರಣ ದಾಖಲು
Tuesday, December 30, 2025
ಉಡುಪಿಯ ಕೊಡವೂರು ವಾರ್ಡಿನ ಬಾಚನಬೈಲು ಪ್ರದೇಶದಲ್ಲಿ ದಲಿತ ಮಹಿಳೆ ವಸಂತಿ ಎಂಬವರ ಜಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಲು ಹೊರಟಿದ್ದಲ್ಲದೇ ಅವಾಚ್ಯವಾಗಿ ನಿಂದಿಸಿದ ಆರೋಪದಲ್ಲಿ 15 ಮಂದಿಯ ವಿರುದ್ಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಚನಬೈಲು ನಿವಾಸಿ ವಸಂತಿ ಅವರು ನೀಡಿದ ದೂರಿನಂತೆ ಮಾಲತೇಶ್, ಆತನ ಪತ್ನಿ ಸೀತಾ, ಆನಂದ, ಕೆ.ವಿಜಯ ಸೇರಿ 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ವಸಂತಿ ಅವರ ಜಾಗದಲ್ಲಿ ಜೆಸಿಬಿ ತಂದು ರಸ್ತೆ ನಿರ್ಮಿಸಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಿದ ವಸಂತಿ ಅವರ ಮೇಲೆ ಹಲ್ಲೆ ನಡೆಸಿ ಬೆದರಿಯೊಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 138/2025, ಕಲಂ: 189(2). 191(2). 329(3) 352.351(2) ಜೊತೆಗೆ 190 BNS 2023 ಮತ್ತು ಕಲಂ 3(1)(r) 3(1)(s) SC/ST (POA) Act 1989 ರಂತೆ ಪ್ರಕರಣ ದಾಖಲಾಗಿದೆ.