ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರ ವಾಟ್ಸಾಪ್ ಹ್ಯಾಕ್...!
Tuesday, December 30, 2025
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರ ವಾಟ್ಸ್ಆಪ್ ಸಂಖ್ಯೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟು ಸಂದೇಶ ರವಾನೆಯಾಗಿದೆ.
ಈ ಬಗ್ಗೆ ಸ್ವತಹಃ ಯಶ್ ಪಾಲ್ ಸುವರ್ಣ ಅವರ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ. ವಾಟ್ಸ್ ಆಪ್ ಸಂಖ್ಯೆ 9945246366 ಹ್ಯಾಕ್ ಆಗಿದ್ದು, ಹಲವು ವ್ಯಕ್ತಿಗಳಿಗೆ ಈ ಸಂಖ್ಯೆಯಿಂದ ಗೂಗಲ್ ಪೇ ಮೂಲಕ ಹಣ ನೀಡುವಂತೆ ಸಂದೇಶಗಳು ಬರುತ್ತಿವೆ. ದಯವಿಟ್ಟು ಈ ಸಂಖ್ಯೆಗೆ ಯಾರೂ ಹಣ ನೀಡದಂತೆ ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.