ನಿಯಂತ್ರಣ ತಪ್ಪಿ ಮನೆಯೊಳಗೆ ನುಗ್ಗಿದ ಟೆಂಪೋ..!
Tuesday, December 30, 2025
ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಟೆಂಪೋ ಒಂದು ರಸ್ತೆ ಬದಿಯಲ್ಲಿದ್ದ ಮನೆಗೆ ನುಗ್ಗಿದ ಘಟನೆ ರಾಹೆ 66ರ ಹೆಜಮಾಡಿ ಕನ್ನಂಗಾರ್ ಗರೊಡಿ ಬಳಿ ಸಂಭವಿಸಿದೆ.
ಪಡುಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸಂಚಾರಿಸುತ್ತಿದ್ದ ವಿಶ್ವ ಟ್ರಾನ್ಸ್ಪೋರ್ಟ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಮಂಜತೋಟ ಇಸ್ಮಾಯಿಲ್ ಎಂಬವರ ಮನೆಗೆ ಢಿಕ್ಕಿ ಹೊಡೆದಿದೆ. ಮನೆಯ ಮಂದಿ ಕೊಣೆಯಲ್ಲಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಮನೆಗೆ ಭಾಗಶಃ ಹಾನಿಯಾಗಿದೆ.